ಅಪಘಾತದಲ್ಲಿ ಪಂತ್ ಅವರ ಹಣೆ, ಬಲ ಮೊಣಕಾಲು, ಪಾದ ಮತ್ತು ಮಣಿಕಟ್ಟಿನ ಮೇಲೆ ತೀವ್ರ ಗಾಯಗಳಾಗಿದ್ದವು. ಅದೃಷ್ಟವಶಾತ್ ಯಾವುದೇ ಸುಟ್ಟ ಗಾಯಗಳಾಗಿಲ್ಲ. ಮೆದುಳು ಮತ್ತು ಬೆನ್ನಿನ ಮೇಲೂ ಪರಿಣಾಮ ಬೀರಲಿಲ್ಲ. MRI ಸ್ಕ್ಯಾನ್ ಸಾಮಾನ್ಯವಾಗಿತ್ತು. ಬಿಸಿಸಿಐ ಪಂತ್ ಅವರ ವೈದ್ಯಕೀಯ ಚಿಕಿತ್ಸೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಗತ್ಯವಿದ್ದರೆ ಪಂತ್ ಅವರನ್ನು ಲಂಡನ್ಗೆ ಕಳುಹಿಸುವ ವ್ಯವಸ್ಥೆಯನ್ನೂ ಬಿಸಿಸಿಐ ಮಾಡುತ್ತಿದೆ ಎಂದು ವರದಿಯಾಗಿದೆ.