ಉತ್ತರಾಖಂಡದ ಮಂಗಳೂರು ಬಳಿ ಇಂದು ಬೆಳಗ್ಗೆ 5.15ರ ಸುಮಾರಿಗೆ ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್ ಪಂತ್ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಅಪಘಾತದ ನಂತರ ಅವರ ಕಾರು ಸುಟ್ಟು ಕರಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಚ್ಚಿನ ತಪಾಸಣೆಗಾಗಿ ಅವರನ್ನು ಡೆಹ್ರಾಡೂನ್ಗೆ ಕರೆತರಲಾಗುತ್ತಿದೆ. ಸದ್ಯ ಪಂತ್ಗೆ ಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಅವರು ಕಾರಿನಲ್ಲಿ ಒಬ್ಬರೇ ಇದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
2018ರ ಐಸಿಸಿ ಪುರುಷರ ಎಮರ್ಜಿಂಗ್ ಕ್ರಿಕಿಟ್ ಪ್ಲೇಯರ್ ಪ್ರಶಸ್ತಿಯನ್ನು ಪಂತ್ ತಮ್ಮ ತೆಕ್ಕೆಗೆ ಬಾಜಿಕೊಂಡಿದ್ದರು. ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅತಿ ಕಡಿಮೆ ಟೆಸ್ಟ್ ಆಡಿದ್ದಾರೆ. ಆದಾಗ್ಯೂ, ಸುದೀರ್ಘ ಸ್ವರೂಪದಲ್ಲಿ 50 ಸಿಕ್ಸರ್ಗಳನ್ನು ಬಾರಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇವರು ಈ ಸಾಧನೆಯನ್ನು ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಗಿದೆ.
ಪಂತ್ ಮೊಣಕಾಲಿನ ಇಂಜುರಿಗೆ ಒಳಗಾಗಿದ್ದು, ಲಂಕಾ ಸರಣಿಯಿಂದ ಹೀಗಾಗಿ ದೂರ ಉಳಿಸಿದ್ದರು. ಇದರಿಂದಾಗಿ ಅವರು ಮುಂದಿನ ನ್ಯೂಜಿಲ್ಯಾಂಡ್ ಸರಣಿಗೆ ಮರಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಅವರ ಕಾಲು ಮುರಿತವಾಗಿರುವುದರಿಂದ ಅವರ ಈ ವರ್ಷದ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಅನುಮಾನಗಳು ಮೂಡಿದೆ. ಅಲ್ಲದೇ ಈ ಬಾರಿಯ ಏಕದಿನ ವಿಶ್ವಕಪ್ಗೆ ಮರಳುತ್ತಾರೆಯೇ ಎಂಬ ಪ್ರಶ್ನೆ ಮೂಡದೆ.