Virat Kohli - Rinku Singh: ಪಂದ್ಯದ ನಂತರ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದು, ಇದರಲ್ಲಿ ರಿಂಕು ಸಿಂಗ್ ಅವರು ವಿರಾಟ್ ಕೊಹ್ಲಿ ಕಾಲಿಗೆ ಬಿದ್ದಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಪಂದ್ಯದ ನಂತರ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
2/ 8
ಇದರಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ರಿಂಕು ಸಿಂಗ್ ಅವರು ವಿರಾಟ್ ಕೊಹ್ಲಿಗೆ ತೋರಿಸಿದ ಗೌರವವನ್ನು ನೋಡಿದ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.
3/ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಗೆ ನಿಲ್ಲಿಸಿ ಗೆಲುವು ಸಾಧಿಸಿತು. ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಪರಸ್ಪರ ಕೈಕುಲುಕುತ್ತಿದ್ದಾಗ ರಿಂಕು ಸಿಂಗ್ ವಿರಾಟ್ ಕೊಹ್ಲಿ ಅವರ ಪಾದ ಮುಟ್ಟಿದರು. (ಕೃಫೆ: ಕ್ರಿಕೆಟ್ ಎಕ್ಸ್ಚೆಂಜ್)
4/ 8
ಇದಾದ ಬಳಿಕ ಟೀಂ ಇಂಡಿಯಾದ ಮಾಜಿ ನಾಯಕ ಈ ಯುವ ಆಟಗಾರನನ್ನು ಅಪ್ಪಿಕೊಂಡರು. ರಿಂಕು ಸಿಂಗ್ ಅವರ ಈ ಗೆಸ್ಚರ್‌ನ ವೀಡಿಯೊಗಳು ಮತ್ತು ಚಿತ್ರಗಳನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಹಂಚಿಕೊಳ್ಳುತ್ತಿದ್ದಾರೆ.
5/ 8
ಇದರೊಂದಿಗೆ ಅಭಿಮಾನಿಗಳು ಕೂಡ ರಿಂಕು ಸಿಂಗ್ ಅವರನ್ನು ಶ್ಲಾಘಿಸುತ್ತಿದ್ದಾರೆ, ಏಕೆಂದರೆ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಹೆಚ್ಚು ಹೊಗಳಿಕೆಗೆ ಪಾತ್ರರಾದ ನಂತರವೂ ಅವರ ನಡವಳಿಕೆ ಬದಲಾಗಿಲ್ಲ. ರಿಂಕು ಸಿಂಗ್ ಅವರಿಗೆ ಹಿರಿಯರಿಗೆ ಹೇಗೆ ಗೌರವ ಕೊಡಬೇಕೆಂದು ಚೆನ್ನಾಗಿ ಗೊತ್ತು ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
6/ 8
ಈ ಐಪಿಎಲ್‌ನಲ್ಲಿ ರಿಂಕು ಸಿಂಗ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಋತುವಿನ ಆರಂಭದಿಂದಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಗುಜರಾತ್ ಟೈಟಾನ್ಸ್‌ನ ಯಶ್ ದಯಾಲ್ ವಿರುದ್ಧ ಅಂತಿಮ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸುವ ಮೂಲಕ ಮುಖ್ಯಭೂಮಿಕೆಗೆ ಬಂದರು.
7/ 8
18ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ರಿಂಕು ಸಿಂಗ್ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಗೆ ಸತತ ಮೂರು ಎಸೆತಗಳಲ್ಲಿ 6, 4, 4 ರನ್ ಸಿಡಿಸಿದರು. ಅವರು 10 ಎಸೆತಗಳಲ್ಲಿ 18 ರನ್ ಗಳಿಸಿದರು ಮತ್ತು ಕೆಕೆಆರ್ 20 ಓವರ್‌ಗಳಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ 200 ರನ್ ಗಳಿಸಿತು.
8/ 8
ಗುಜರಾತ್ ಟೈಟಾನ್ಸ್ ವಿರುದ್ಧ ರಿಂಕು ಸಿಂಗ್ ಅವರ ಪ್ರದರ್ಶನದಿಂದ ವಿರಾಟ್ ಕೊಹ್ಲಿ ತುಂಬಾ ಪ್ರಭಾವಿತರಾಗಿದ್ದರು. ಇಂದು ಯುವಕರು ಮಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದು ಅವರು ಹೇಳಿದ್ದರು. ಈ ಐಪಿಎಲ್ ಸೀಸನ್ ನೋಡುತ್ತಿದ್ದರೆ ಈ ಯುವಕರು ಏನು ಮಾಡುತ್ತಿದ್ದಾರೆಂದು ನನಗೆ ಊಹಿಸಲೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.