Team India: ಮೇಜರ್ ಸರ್ಜರಿಗೆ ಮುಂದಾದ ಬಿಸಿಸಿಐ! ವಿಶ್ವಕಪ್ ತಂಡದಿಂದ ಔಟ್ ಆಗ್ತಾರಾ ಓಪನರ್ಸ್?
Team India: ಟಿ20 ವಿಶ್ವಕಪ್ ಬಳಿಕ ಬಿಸಿಸಿಐ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ನಡೆಸುತ್ತಿದೆ. ಇದರ ಭಾಗವಾಗಿ ಈಗಾಗಲೇ ಬಿಸಿಸಿಐ ಟೀಂ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಇದೀಗ ಕೆಲ ಫಾರ್ಮ್ನಲ್ಇ ಇರದ ಆಟಗಾರರನ್ನೂ ಕೈಬಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳಿಂದ ಟೀಂ ಇಂಡಿಯಾ ಪರಿಸ್ಥಿತಿ ಚೆನ್ನಾಗಿಲ್ಲ. ಅದರಲ್ಲೂ ಏಷ್ಯಾ ಕಪ್ (Asia Cup) ಸೋಲಿನ ಬಳಿಕ ಭಾರತ ತಂಡ ಟಿ20 ವಿಶ್ವಕಪ್ನಿಂದಲೂ ಸೆಮೀಸ್ ಹಂತದಿಂದ ಹೊರಬಿಂದಿತು. ಹೀಗಾಗಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ ಹೀನಾಯ ಸೋಲು ಕಂಡಿತು.
2/ 9
15 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುವ ಆಶಯದೊಂದಿಗೆ ಭಾರತ ಟಿ20 ವಿಶ್ವಕಪ್ ಕಣಕ್ಕೆ ಪ್ರವೇಶಿಸಿತು, ಆದರೆ ಮತ್ತೊಮ್ಮೆ ಸೆಮಿಫೈನಲ್ನಲ್ಲಿ ಸೋತು ಮನೆಗೆ ತೆರಳಿತು. ದ್ವಿಪಕ್ಷೀಯ ಸರಣಿ ಮತ್ತು ಗ್ರೂಪ್ ಹಂತದಲ್ಲಿ ಉತ್ತಮವಾಗಿ ಆಡಿದರೂ ಅಂತಿಮ ಹಂತದಲ್ಲಿ ಸೋಲನ್ನು ಕಾಣುತ್ತಿದೆ.
3/ 9
ಟಿ20 ವಿಶ್ವಕಪ್ ಬಳಿಕ ಬಿಸಿಸಿಐ ಮೇಜರ್ ಸರ್ಜರಿ ಆರಂಭಿಸಿದೆ. ಈ ಕ್ರಮದಲ್ಲಿ ಮೊದಲು ಆಯ್ಕೆ ಸಮಿತಿ ವಜಾಗೊಳಿಸಿತು. ಈಗ ಟೀಮ್ನಲ್ಲಿರುವ ಹಲವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
4/ 9
ಕೆಲ ದಿನಗಳಿಂದ ಫಾರ್ಮ್ ನಲ್ಲಿರದ ಆಟಗಾರರನ್ನು ತಂಡದಿಂದ ಕೈಬಿಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಪಟ್ಟಿಯಲ್ಲಿ ಇಬ್ಬರು ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
5/ 9
ಇತ್ತೀಚಿನ ದಿನಗಳಲ್ಲಿ ರಿಷಬ್ ಪಂತ್ ಮತ್ತು ಶಿಖರ್ ಧವನ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ, ರಿಷಬ್ ಪಂತ್ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಶಿಖರ್ ಧವನ್ ಏಕದಿನದಲ್ಲಿ ಮಾತ್ರ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.
6/ 9
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 72 ರನ್ ಗಳಿಸಿದ್ದ ಧವನ್ ಫಾರ್ಮ್ ನಲ್ಲಿರುವಂತೆ ಕಾಣುತ್ತಿದ್ದರು. ಆದರೆ ಆ ಬಳಿಕ ಮತ್ತೆ ನಿರೀಕ್ಷಿತ ಮಟ್ಟದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಸತತ 4 ಪಂದ್ಯಗಳಲ್ಲಿ ಏಕ ಅಂಕಿ ಸ್ಕೋರ್ಗೆ ಸೀಮಿತಗೊಂಡರು.
7/ 9
ಅದೇ ವೇಳೆ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಬದಲಿಗೆ ಇಶಾನ್ ಕಿಶನ್ ದ್ವಿಶತಕ ಸಿಡಿಸಿ ಮಿಂಚಿದ್ದರು. ಧವನ್ ಬದಲಿಗೆ ಇಶಾನ್ ಕಿಶನ್ ಖಾಯಂ ಆರಂಭಿಕರಾಗಿ ಕಣಕ್ಕಿಳಿಸಲು ಬಿಸಿಸಿಐ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.
8/ 9
ಪಂತ್ ಕೂಡ ಸತತವಾಗಿ ವಿಫಲವಾಗುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ ಏಕೈಕ ಕಾರಣಕ್ಕೆ ಪಂತ್ ಇನ್ನೂ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ ಪಂತ್ ಆಟ ಬದಲಾಗುತ್ತಿಲ್ಲ. ಪಂತ್ ಅವರನ್ನು ಬಿಟ್ಟು ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡುವ ಸಾಧ್ಯತೆಯೂ ಇದೆ.
9/ 9
ಇದರಿಂದಾಗಿ ಪಂತ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದ್ದು, ಮುಂಬರಲಿರುವ ಏಕದಿನ ವಿಶ್ವಕಪ್ನಿಂದ ಈ ಇಬ್ಬರೂ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.