ಇದರ ಜೊತೆಗೆ ಐಸಿಸಿ ಸದಸ್ಯತ್ವ ಹೊಂದಿರುವ ಟೀಂ ಒಂದರ ವಿರುದ್ಧ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ತಂಡ ಎಂಬ ದಾಖಲೆ ಈ ಮೊದಲು ಪಾಕಿಸ್ತಾನ ಹೆಸರಿನಲ್ಲಿತ್ತು. ಆದರೆ ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಗೆಲುವಿನ ಬಳಿಕ ಈ ದಾಖಲೆಯನ್ನು ಭಾರತ ಮುರಿದಿದೆ. ಈ ಮೊದಲು ಪಾಕ್ ತಂಡವು ವಿಂಡೀಸ್ ವಿರುದ್ಧ 143 ರನ್‌ಗಳಿಂದ ಗೆದ್ದಿತ್ತು ಇದೀಗ ಭಾರತ ಕಿವೀಸ್ ವಿರುದ್ಧ 168 ರನ್ಗಳ ಅಂತರದಲ್ಲಿ ಗೆದ್ದಿದೆ.