RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

RCB vs MI, WPL 2023: ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ. ಮುಂಬೈ 16.3 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್​ ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.

First published:

  • 18

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    WPl ಟೂರ್ನಿಯ 19ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ. ಮುಂಬೈ 16.3 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್​ ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.

    MORE
    GALLERIES

  • 28

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಈ ಮೂಲಕ ಮಹಿಳಾ ಐಪಿಎಲ್​ನ ಅಂತಿಮ ಪಂದ್ಯದಲ್ಲಿಯೂ ಬೆಂಗಳೂರು ತಂಡ ಸೋಲನ್ನಪ್ಪಿತು. ಈ ಮೂಲಕ 2023ರ ಮೊದಲ ಸೀಸನ್​ಗೆ ಗುಡ್​ ಬೈ ಹೇಳಿದೆ. ಇತ್ತ ಪಂದ್ಯ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

    MORE
    GALLERIES

  • 38

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡ 20 ಓವರ್​ನಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಗಳಿಸಿತು. ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಇಬ್ಬರೂ 29 ರನ್​ ಗಳಿಸಿದರು. ಬಿಟ್ಟರೆ ನಾಯಕಿ ಸ್ಮೃತಿ ಮಂಧಾನ 24 ರನ್​ ಗಳಿಸಿದ್ದೇ ಅತ್ಯದಿಕ ಸ್ಕೋರ್​ ಆಗಿದೆ.

    MORE
    GALLERIES

  • 48

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಈ ಮೂಲಕ 8 ಪಂದ್ಯಗಳಲ್ಲಿ ಆರ್​ಸಿಬಿ ತಂಡ ಕೇವಲ 2 ಪಂದ್ಯ ಗೆದ್ದು 6ರಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ 8ರಲ್ಲಿ 6ರಲ್ಲಿ ಗೆದ್ದು 2ರಲ್ಲಿ ಸೋಲುವ ಮೂಲಕ ಮುಂಬೈ ಮುಂದಿನ ಹಂತಕ್ಕೆ ತಲುಪಿದೆ.

    MORE
    GALLERIES

  • 58

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಆರ್​ಸಿಬಿ ತಂಡವು ಸೋಲಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಅಭಿಯಾನ ಅಂತ್ಯಗೊಳಿಸಿದೆ. ಈ ಮೂಲಕ ಅಭಿಮಾನಿಗಳ ಕನಸು ಮತ್ತೊಮ್ಮೆ ಕನಸಾಗಿಯೇ ಉಳಿದಿತು. ಮೊದಲ ಸೀಸನ್​ನಲ್ಲಿ ಆರ್​ಸಿಬಿ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿ ಕಣಕ್ಕಿಳಿದಿತ್ತು.

    MORE
    GALLERIES

  • 68

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಆದರೆ ಆರ್​ಸಿಬಿ ಪರ ಸೋಫಿಯಾ ಡೇವಿನ್​ 266 ರನ್​ ಮತ್ತು ಎಲ್ಲಿಸ್​ ಪೆರ್ರಿ 253 ರನ್​ ಗಳಿಸುವ ಮೂಲಕ ಮಹಿಳಾ ಐಪಿಎಲ್​ನ ಟಾಪ್​ ಸ್ಕೋರರ್​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೇ ಈ ಬಾರಿ 99 ರನ್​ ಗಳಿಸುವ ಮೂಲಕ ಎಲ್ಲಿಸ್​ ಪೆರ್ರಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

    MORE
    GALLERIES

  • 78

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಆರ್​ಸಿಬಿ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್.

    MORE
    GALLERIES

  • 88

    RCB vs MI, WPL 2023: ಮುಂದಿನ ಸಲ ಕಪ್​ ನಮ್ದೇ, ಸೋಲಿನೊಂದಿಗೆ ಮಹಿಳಾ IPLಗೆ ಆರ್​ಸಿಬಿ ಗುಡ್​ ಬೈ

    ಬೇಸರದಲ್ಲಿಯೂ ಆರ್​ಸಿಬಿ ಅಭಿಮಾನಿಗಳು ಮುಂದಿನ ಸಲ ಕಪ್​ ನಮ್ದೇ ಎಂಬ ಸ್ಲೋಗನ್​ ಜೊತೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ತಂಡವನ್ನು ಸಪೋರ್ಟ್​ ಮಾಡುತ್ತಿದ್ದಾರೆ.

    MORE
    GALLERIES