ರಾಯಚೂರು ಜಿಲ್ಲೆ ಸಿಂಧನೂರಿನ ಮನೋಜ್ ಬಾಂಡಗೆ ಅವರು ಆಲ್ ರೌಂಡರ್ ಆಗಿದ್ದಾರೆ. ಅವರು, ಎಡಗೈ ಬ್ಯಾಟ್ಸ್ಮನ್ ಹಾಗೂ ಬಲಗೈ ವೇಗಿ ಆಗಿದ್ದಾರೆ. 2019ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮೂಲಕ ಕರ್ನಾಟಕ ತಂಡಕ್ಕೆ ಮನೋಜ್ ಪದಾರ್ಪಣೆ ಮಾಡಿದ್ದರು. 24 ವರ್ಷದ ಮನೋಜ್ ಬಾಂಡಗೆ ಅವರು ಒಟ್ಟು 16 ಟಿ20 ಪಂದ್ಯಗಳ ಮೂಲಕ 7 ಇನಿಂಗ್ಸ್ನಲ್ಲಿ 116 ರನ್ ಕಲೆಹಾಕಿದ್ದಾರೆ. ಜೊತೆಗೆ 8 ವಿಕೆಟ್ಗಳನ್ನು ಪಡೆದಿದ್ದಾರೆ.