RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

Virat Kohli: ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಆಗಟಾರ ಎಂಬ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

First published:

  • 18

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಟಾಸ್​ ಗೆದ್ದ ಗುಜರಾತ್​ ಟೈಟನ್ಸ್ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ನಿಗಿದತ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 197 ರನ್ ಗಳಿಸಿದೆ.

    MORE
    GALLERIES

  • 28

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರ ಬೌಂಡರಿಗಳ ಅಬ್ಬರದಿಂದ ಆರ್​ಸಿಬಿ ಬೃಹತ್​ ಸ್ಕೋರ್​ ಮಾಡುವಲ್ಲಿ ಸಹಾಯಕವಾಯಿತು. ಇದೇ ವೇಳೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು.

    MORE
    GALLERIES

  • 38

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೊಹ್ಲಿ ಬಿರುಸಿನ ಶತಕ ಸಿಡಿಸಿದ್ದ ಕೊಹ್ಲಿ ಇಂದು ಮತ್ತೊಮ್ಮೆ ತವರಿನಲ್ಲಿ ಗುಜರಾತ್​ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ 61 ಎಸೆತದಲ್ಲಿ 13 ಫೊರ್​ ಮತ್ತು 1 ಸಿಕ್ಸ್ ಮೂಲಕ 101 ರನ್​ ಗಳಿಸಿ ಅಜೇಯರಾಗಿ ಉಳಿದರು.

    MORE
    GALLERIES

  • 48

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಇದೇ ವೇಳೆ ಐಪಿಎಲ್‌ನಲ್ಲಿ ಶತಕಗಳ ವಿಷಯದಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರನ್ನು ಸರಿಗಟ್ಟಿದ್ದಾರೆ. ಈ ಮೂಲಕ ಕೊಹ್ಲಿ ಐಪಿಎಲ್​ನಲ್ಲಿ ಒಟ್ಟು 7 ಶತಕ ಸಿಡಿಸಿದ್ದಾರೆ, ಟಿ20 ಕ್ರಿಕೆಟ್​ನಲ್ಲಿ 8 ಶತಕ ಸಿಡಿಸಿದಂತಾಗಿದೆ.

    MORE
    GALLERIES

  • 58

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಇದರೊಂದಿಗೆ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಶತಕ ಬಾರಿಸಿದ RCB ತಂಡದ ಮೊದಲ ಆಟಗಾರ ಎಂಬ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

    MORE
    GALLERIES

  • 68

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಇನ್ನು, ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಆರ್​ಸಿಬಿ ಪ್ಲೇಆಫ್​ ಕನಸನ್ನು ಈವರೆಗೆ ಜೀವಂತವಾಗಿರಿಸಿದ್ದಾರೆ. ಅತ್ತ ಪಂದ್ಯ ನೋಡಲು ಬಂದ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಸಹ ಪಂದ್ಯವನ್ನು ಎಂಜಾಯ್​ ಮಾಡುತ್ತಿದ್ದು, ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಿಂದ ಕೊಹ್ಲಿಗೆ ಪ್ಲೈಯಿಂಗ್​ ಕಿಸ್​ ನೀಡಿದ ಫೋಟೋ ಸಖತ್​ ವೈರಲ್ ಆಗಿದೆ.

    MORE
    GALLERIES

  • 78

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ಇದೀಗ ಆರ್​ಸಿಬಿ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ತಂಡ 4ನೇ ಸ್ಥಾನದಲ್ಲಿದೆ. ಹೀಗಾಗಿ ಆರ್​ಸಿಬಿ ಇಂದಿನ ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇಆಫ್​ಗೆ ಪ್ರವೇಶಿಸಲಿದೆ.

    MORE
    GALLERIES

  • 88

    RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್​ ಕೊಹ್ಲಿ, ಬ್ಯಾಕ್​ ಟು ಬ್ಯಾಕ್ 'ವಿರಾಟ'​ ಶತಕ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ , ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.

    MORE
    GALLERIES