RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

RCB vs GG, WPL 2023: ಬೆಂಗಳೂರು ತಂಡವು 15.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 189 ರನ್​ ಗಳಿಸುವ ಮೂಲಕ ಗುಜರಾತ್​ ಜೈಂಟ್ಸ್​​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

First published:

  • 17

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಬೆಂಗಳೂರು ತಂಡವು 15.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 189 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು.

    MORE
    GALLERIES

  • 27

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್​ ಗಳಿಸಿತು. ಗುಜರಾತ್ ಪರ ಲಾರಾ ವೊಲ್ವಾರ್ಡ್ಟ್ 68 ರನ್ ಮತ್ತು ಆಶ್ಲೀಗ್ ಗಾರ್ಡ್ನರ್ 41 ರನ್​ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ಪ್ರಮುಖ ಕಾರಣರಾದರು.

    MORE
    GALLERIES

  • 37

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಇತ್ತ, ಟಾಸ್​ ಸೋತು ಮೊದಲು ಬೌಲಿಂಗ್ ಮಾಡಿದ ಆರ್​ಸಿಬಿ ಪರ ಶ್ರೇಯಾಂಕ ಪಾಟೀಲ್ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಸೋಫಿ ಡಿವೈನ್ ಮತ್ತು ಪ್ರೀತಿ ಬೋಸ್ ತಲಾ 1 ವಿಕೆಟ್ ಪಡೆದು ಮಿಂಚಿದರು.

    MORE
    GALLERIES

  • 47

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಬಳಿಕ ಗುಜರಾತ್ ನೀಡಿದ 189 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ಭರ್ಜರಿ ಆರಂಭ ದೊರಕಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಬೋಬ್ಬರಿ ಶತಕದ ಜೊತೆಯಾಟವಾಡಿದರು. ಈ ವೇಳೆ ಆರಂಭಿಕ ಜೋಡಿ 125 ರನ್​ ಗಳಿಸುವ ಮೂಲಕ ಗೆಲುವಿನ ಆಸೆ ಮೂಡಿಸಿತು.

    MORE
    GALLERIES

  • 57

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಈ ವೇಳೆ ಮಂಧಾನ 37 ರನ್​​ಗೆ ವಿಕೆಟ್​ ಒಪ್ಪಿಸಿದರೆ, ಇತ್ತ ಸೋಫಿ ಡಿವೈನ್ ಗುಜರಾತ್​ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಸಲ್ಪದರಲ್ಲಿಯೇ ಚೊಚ್ಚಲ ಶತಕದಿಂದ ವಂಚಿತರಾದರು.

    MORE
    GALLERIES

  • 67

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಸೋಫಿ ಡಿವೈನ್ ಇಂದು ಗುಜರಾತ್​ ಬೌಲರ್​ಗಳ ಬೆವರಿಳಿಸಿದರು. ಅವರು ಕೇವಲ 36 ಎಸೆತದಲ್ಲಿ 8 ಸಿಕ್ಸ್ ಮತ್ತು 9 ಪೋರ್​ ಮೂಲಕ 99 ರನ್​ ಗಳಿಸುವ ಮೂಲಕ ಕೇವಲ 1 ರನ್​ನಿಂದ ಶತಕ ವಂಚಿತರಾದರು. ಉಳಿದಂತೆ ಎಲ್ಲಿಸ್ ಪೆರ್ರಿ 19 ರನ್ ಮತ್ತು ಹೀದರ್ ನೈಟ್ 22 ರನ್ ಗಳಿಸಿದರು.

    MORE
    GALLERIES

  • 77

    RCB vs GG, WPL 2023: ಸೋಫಿ ಡಿವೈನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಗುಜರಾತ್​, RCB ತಂಡಕ್ಕೆ ಭರ್ಜರಿ ಜಯ

    ಆರ್​ಸಿಬಿ ಪ್ಲೇಯಿಂಗ್ 11: ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್.

    MORE
    GALLERIES