ವಾಸ್ತವವಾಗಿ, ಪ್ರತಿ ಬಾರಿಯೂ ಟ್ರೋಫಿ ಗೆಲ್ಲುವ ನಿರೀಕ್ಷೆಯಿರುವ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖಂಡಿತವಾಗಿಯೂ ಸೇರಿದೆ. ಆದರೆ ಈ ಬಾರಿ ಬೌಲಿಂಗ್ ಪಡೆ ಸೀಮಿತವಾಗಿರುವುದರಿಂದ ಧೋನಿ ತಂಡದ ಮೇಲೆ ಚೆನ್ನೈ ಅಭಿಮಾನಿಗಳು ಬಿಟ್ಟರೆ ಬೇರೆ ಯಾರೂ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ ಮೈದಾನದಲ್ಲಿ ಚೆನ್ನೈ ಎಲ್ಲಾ ವಿಭಾಗದಲ್ಲೂ ಉತ್ತಮ ರೀತಿ ಆಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸೂಪರ್ ಕಿಂಗ್ಸ್ ತಮ್ಮ ಅಮೋಘ ಆಟದ ಶೈಲಿಯಿಂದ ಸತತ ಗೆಲುವನ್ನು ದಾಖಲಿಸುತ್ತಿದ್ದಾರೆ.