ಹೌದು, ಐಪಿಎಲ್ 2023ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡ ಎರಡನೇ ಬಾರಿಗೆ ಸ್ಲೋ ಓವರ್ ರೇಟ್ ಹೊಂದಿದ್ದ ಕಾರಣಕ್ಕೆ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಉಳಿದಂತೆ ತಂಡದ ಆಟಗಾರರು ಮತ್ತು ಇಂಪ್ಯಾಕ್ಟ್ ಪ್ಲೇಯರ್ಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಎರಡರಲ್ಲಿ ಯಾವುದು ಕಡಿಮೆ ಮೊತ್ತ ಇರುತ್ತೆ ಅದು ಅಟಗಾರರಿಗೆ ಅನ್ವಯ ಆಗಲಿದೆ.
ಏಪ್ರಿಲ್ 23 ರಂದು ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಸ್ಲೋ ಓವರ್ ರೇಟ್ ಹೊಂದಿತ್ತು. ಈ ಆವೃತ್ತಿಯಲ್ಲಿ ಇದಕ್ಕೂ ಮುನ್ನ ಫಾಫ್ ಡು ಪ್ಲೆಸಿಸ್ ತಂಡದ ಕ್ಯಾಪ್ಟನ್ ಆಗಿ ಲಕ್ನೋ ವಿರುದ್ಧ ಪಂದಯದಲ್ಲೂ ಸ್ಲೋ ಓವರ್ ರೇಟ್ ಹೊಂದಿತ್ತು. ಪರಿಣಾಮ ಡು ಪ್ಲೆಸಿಸ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಈ ಪಂದ್ಯದಲ್ಲಿ ಕೊನೆಯ ಎಸೆದದಲ್ಲಿ ಆರ್ಸಿಬಿ ತಂಡ ರೋಚಕ ಸೋಲುಂಡಿತ್ತು.
ಆರ್ಸಿಬಿ ತಂಡವನ್ನು ಡು ಪ್ಲೆಸಿಸ್ ಆರಂಭದ ಪಂದ್ಯಗಳಲ್ಲಿ ಮುನ್ನಡೆಸಿದ್ದರು ಸಹ ಅವರು ಈಗ ಗ್ರೇಡ್-ಒನ್ ಇಂಟರ್ಕೊಸ್ಟಲ್ ಸ್ಟ್ರೈನ್ ಸಮಸ್ಯೆಯಿಂದ ಬಳುತ್ತಿದ್ದಾರೆ. ಪರಿಣಾಮ ಆರ್ಸಿಬಿ ಫ್ರಾಂಚೈಸಿ ಡು ಪ್ಲೆಸಿಸ್ಗೆ ಕೇವಲ ಆರ್ಸಿಬಿ ಬ್ಯಾಟಿಂಗ್ ವೇಳೆ ಮಾತ್ರ ಆಡಲು ನೀಡಿ, ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ವಿಶ್ರಾಂತಿ ನೀಡುತ್ತಿದೆ.
ಈಗಾಗಲೇ ಎರಡೆರು ಬಾರಿ ಸ್ಲೋ ಓವರ್ ರೇಟ್ನಿಂದ ದಂಡ ತೆತ್ತಿರುವ ಕಾರಣ ಆರ್ಸಿಬಿ ತಂಡ ಮುಂದಿನ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಇನ್ನು, ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ ನಡುವಿನ ಪಂದ್ಯವು ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿತು. ಆರ್ಸಿಬಿ ನೀಡಿದ 190 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸುವ ಮೂಲಕ 7 ರನ್ಗಳ ಸೋಲನ್ನಪ್ಪಿತು.