IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

RCB 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮೊದಲ ಪ್ರಶಸ್ತಿಗಾಗಿ ಬೆವರು ಹರಿಸುತ್ತಿದೆ. ಪ್ರಸ್ತುತ ಆರ್‌ಸಿಬಿ ತಂಡವನ್ನು ಗಮನಿಸಿದರೆ, ಈ ಬಾರಿ ತಂಡವು ತನ್ನ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಲಿದೆ ಎಂದು ಕಾಣುತ್ತಿದೆ.

First published:

  • 17

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಐಪಿಎಲ್ 2023 (IPL 2023) ನ 16ನೇ ಋತುವಿನ ಆರಂಭಕ್ಕೆ ಈಗ ಕೆಲವೇ ದಿನಗಳು ಉಳಿದಿವೆ. ಮುಂಬರುವ ಸೀಸನ್‌ಗಾಗಿ ಬಹುತೇಕ ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮೊದಲ ಪ್ರಶಸ್ತಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ.

    MORE
    GALLERIES

  • 27

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಪ್ರಸ್ತುತ ಆರ್‌ಸಿಬಿ ತಂಡವನ್ನು ಗಮನಿಸಿದರೆ, ಈ ಬಾರಿ ತಂಡವು ತನ್ನ ಸುದೀರ್ಘ ಪ್ರಶಸ್ತಿ​​ ಬರವನ್ನು ಕೊನೆಗೊಳಿಸುವ ನಿರೀಕ್ಷಿಯಿದೆ. ಹೌದು, ತಂಡವನ್ನು ನೋಡುತ್ತಿದ್ದರೆ ಈ ಬಾರಿ ಆರ್​ಸಿಬಿ ಕಪ್​ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.

    MORE
    GALLERIES

  • 37

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ: ಪ್ರತಿ ಬಾರಿಯಂತೆ, ಈ ವರ್ಷವೂ ಆರ್‌ಸಿಬಿಯ ಬ್ಯಾಟಿಂಗ್ ಕ್ರಮಾಂಕವು ತುಂಬಾ ಪ್ರಬಲವಾಗಿದೆ. ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಬಲಿಷ್ಠ ಆಟಗಾರರಿದ್ದು, ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ.

    MORE
    GALLERIES

  • 47

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಸ್ಟಾರ್ ಬೌಲರ್‌ಗಳು ಜಾಸ್ತಿ: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಮತ್ತು ಸ್ಟಾರ್ ಬೌಲರ್‌ಗಳಿಂದ ತುಂಬಿದೆ. ವಿಶ್ವಪ್ರಸಿದ್ಧ ಬೌಲರ್‌ಗಳಾದ ಜೋಶ್ ಹೇಜಲ್‌ವುಡ್ ಮತ್ತು ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ ಮತ್ತು ವನಿಂದು ಹಸರಂಗ ಅವರನ್ನು ಒಳಗೊಂಡಿದೆ.

    MORE
    GALLERIES

  • 57

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ನಾಯಕತ್ವದಲ್ಲಿ ಫಾಫ್ ಡು ಪ್ಲೆಸಿಸ್ ಅನುಭವ: ಆಫ್ರಿಕನ್ ಆಟಗಾರ ಫಾಫ್ ಡು ಪ್ಲೆಸಿಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಜೊತೆಗೆ ಶ್ರೇಷ್ಠ ನಾಯಕ. ಅವರು ದಕ್ಷಿಣ ಆಫ್ರಿಕಾ ಹಾಗೂ ಇತರ ಹಲವು ತಂಡಗಳನ್ನು ಮುನ್ನಡೆಸಿದ್ದಾರೆ. ಕಳೆದ ವರ್ಷವೂ ನಾಯಕತ್ವದಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಿರುವಾಗ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಈ ವರ್ಷ ಪ್ರಶಸ್ತಿ ಗೆದ್ದುಕೊಂಡರೆ ಅದರಲ್ಲಿ ಅಚ್ಚರಿಯೇನಿಲ್ಲ.

    MORE
    GALLERIES

  • 67

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್.

    MORE
    GALLERIES

  • 77

    IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!

    ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.

    MORE
    GALLERIES