Team India: ನಾನು ವಾಪಸ್ ಬರ್ತಿದ್ದೀನಿ; ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್
ಟೀಂ ಇಂಡಿಯಾ ಅಭಿಮಾನಿಗಳಿಗೆ ಸ್ಟಾರ್ ಕ್ರಿಕೆಟಿಗ ಗುಡ್ನ್ಯೂಸ್ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯಿಂದ ಸಾಕಷ್ಟು ಸಮಯದಿಂದ ತಂಡದಿಂದ ದೂರವಾಗಿದ್ದ ಕ್ರಿಕೆಟಿಗ ಶೀಘ್ರ ಟೀಂ ಇಂಡಿಯಾಗೆ ವಾಪಸ್ ಆಗ್ತೀದ್ದಿನಿ ಎಂದು ತಿಳಿಸಿದ್ದಾರೆ. ಆತ ಬೇರೆ ಯಾರು ಅಲ್ಲ, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ರವೀಂದ್ರ ಜಡೇಜಾ.
ಟೀಂ ಇಂಡಿಯಾ ಅಭಿಮಾನಿಗಳಿಗೆ ಸ್ಟಾರ್ ಕ್ರಿಕೆಟಿಗ ಗುಡ್ನ್ಯೂಸ್ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯಿಂದ ಸಾಕಷ್ಟು ಸಮಯದಿಂದ ತಂಡದಿಂದ ದೂರವಾಗಿದ್ದ ಕ್ರಿಕೆಟಿಗ ಶೀಘ್ರ ಟೀಂ ಇಂಡಿಯಾಗೆ ವಾಪಸ್ ಆಗ್ತೀದ್ದಿನಿ ಎಂದು ತಿಳಿಸಿದ್ದಾರೆ. ಆತ ಬೇರೆ ಯಾರು ಅಲ್ಲ, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ರವೀಂದ್ರ ಜಡೇಜಾ.
2/ 8
ಏಷ್ಯಾ ಕಮ್ ಸಮಯದಲ್ಲಿ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ರವೀಂದ್ರ ಜಡೇಜಾ ತಂಡದಿಂದ ದೂರವಾಗಿದ್ದರು. ಆ ಬಳಿಕ ಟಿ20 ವಿಶ್ವಕಪ್ ಟೂರ್ನಿ ಕೂಡ ಆಡಿರಲಿಲ್ಲ. ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದರು.
3/ 8
ಸಮುದ್ರದ ಬಳಿ ನಿಂತಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಜಡೇಜಾ, ಶೀಘ್ರ ಭೇಟಿ ಆಗೋಣಾ ಎಂದು ಹಣೆಬರಹ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಖತ್ ಸಂತೋಷಗೊಂಡಿದ್ದಾರೆ.
4/ 8
2019ರ ಏಕದಿನ ವಿಶ್ವಕಪ್ ಬಳಿಕ ಜಡೇಜಾ ತಮ್ಮನ್ನು ಸಾಕಷ್ಟು ಬದಲಿಸಿಕೊಂಡಿದ್ದರು. ಸೀಮಿತ ಓವರ್ ಕ್ರಿಕೆಟ್ಗೆ ಸೂಕ್ತವಾಗುವಂತೆ ತಂಡದ ಫಿನಿಷರ್ ಆಗಿ ಸ್ಫೋಟಕ ಆಟ ಪ್ರದರ್ಶಿಸಿದ್ದರು. ಅಲ್ಲದೇ ಟೆಸ್ಟ್ ಮಾದರಿಯಲ್ಲಿ ಪ್ರಮುಖ ಬ್ಯಾಟರ್ ಆಗಿಯೂ ಮಿಂಚಿದ್ದರು. ಆ ಮೂಲಕ ವಿಶ್ವ ಕ್ರಿಕೆಟ್ನ ಆಲ್ರೌಂಡರ್ ಸ್ಥಾನದಲ್ಲಿ ನಂಬರ್ 01 ಸ್ಥಾನ ಪಡೆದುಕೊಂಡಿದ್ದರು.
5/ 8
ಆದರೆ, ಪ್ರಮುಖ ಸಮಯದಲ್ಲೇ ಗಾಯಕ್ಕೆ ಒಳಗಾಗಿ ಜಡೇಜಾ ತಂಡದಿಂದ ದೂರವಾಗಿದ್ದರು. ಆದರೆ ಶ್ರೀಲಂಕಾ ವಿರುದ್ಧ ಪ್ರಕಟಿಸಿದ್ದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜಡೇಜಾ ಆಯ್ಕೆ ಆಗಿರಲಿಲ್ಲ. ಆದ್ದರಿಂದ ಶ್ರೀಲಂಕಾ ಟೂರ್ನಿಯ ಬಳಿಕ ನಡೆಯುವ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಇದೆ.
6/ 8
ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ ಆಲ್ರೌಂಡರ್ ಆಗಿರುವ ರವೀಂದ್ರ ಜಡೇಜಾ ತಂಡದ ಕೀ ಪ್ಲೇಯರ್ ಆಗುವ ಆಗಲಿದ್ದಾರೆ.
7/ 8
ಭಾರತದಲ್ಲೇ ಟೂರ್ನಿ ನಡೆಯುವುದರಿಂದ ಪಿಚ್ಗಳು ಸ್ಪಿನ್ಗೆ ಹೆಚ್ಚು ಸಹಕಾರ ನೀಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಶ್ವಿನ್ರೊಂದಿಗೆ ಜಡೇಜಾ ಬ್ಯಾಟಿಂಗ್ ಮಾತ್ರವಲ್ಲದೇ, ಬೌಲಿಂಗ್ನಲ್ಲೂ ಪ್ರಮುಖ ಅಸ್ತ್ರವಾಗಲಿದ್ದಾರೆ.
8/ 8
ಇನ್ನು, ಈ ಟೂರ್ನಿಯಲ್ಲಿ ಜಡೇಜಾ ಆಡುವುದು ಖಚಿತನಾ ಎಂಬುವುದು ತಿಳಿಯಬೇಕಾದರೆ, ಬಿಸಿಸಿಐ ಆಯ್ಕೆ ಸಮಿತಿ ತಂಡ ಪ್ರಕಟಿಸುವವರೆಗೂ ಕಾದು ನೋಡಬೇಕಿದೆ.