ಕೊನೆ ಪಂದ್ಯದಲ್ಲಿ 50 ರನ್ ಬಿಟ್ಟುಕೊಟ್ಟಿದ್ದ ಜಡೇಜಾ ಮೇಲೆ ಧೋನಿ ಗರಂ ಆಗಿದ್ದರು. ಆದರೆ ಅದೇ ವೇಳೇ ಜಡ್ಡು ಕೂಡ ಧೋನಿ ಮಾತಿಗೆ ತಿರುಗೇಟು ಕೊಟ್ಟಿದ್ದರು ಎನ್ನಲಾಗಿತ್ತು. ಈ ಘಟನೆ ನಂತರ ಅವರು ಟ್ವಿಟರ್ನಲ್ಲಿ ' ಕರ್ಮವು ನಿಮ್ಮ ಬಳಿಗೆ ಬರಲಿದೆ, ಅದು ಶೀಘ್ರವಾಗಿ ಅಥವಾ ತಡವಾಗಿಯಾದರೂ ಬರುತ್ತದೆ ಎಂದು ಪೋಸ್ಟ್ ಮಾಡಿದ್ದರು. ಅಲ್ಲದೆ ಎರಡು ವಾರಗಳಿಂದ ಜಡೇಜಾ ಅನುಭವಿಸುತ್ತಿರುವ ನೋವಿಗೆ ಇದು ಎಂದು ವ್ಯಕ್ತಿಯೊಬ್ಬರು ಬರೆದ ಪೋಸ್ಟ್ಅನ್ನು ಕೂಡ ಜಡೇಜಾ ಲೈಕ್ ಮಾಡಿದ್ದರು.