ಐಪಿಎಲ್ 2022 ರಲ್ಲ ಮಹೇಂದ್ರ ಸಿಂಗ್ ಧೋನಿ ರವೀಂದ್ರ ಜಡೇಜಾಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ. ಟೀಮ್ ಇಂಡಿಯಾ ಮತ್ತು ಸಿಎಸ್‌ಕೆಯ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು, ಅದೇ ಸಮಯದಲ್ಲಿ ಧೋನಿಗೆ 12 ಕೋಟಿ ರೂ ಗೆ ಉಳಿಸಿಕೊಂಡಿತ್ತು. ಇನ್ನು ಜಡೇಜಾ ಅವರನ್ನೇ ನಾಯಕರನ್ನಾಗಿ ಮಾಡಲು ಕೆಲ ಪ್ರಮುಖ 5 ಕಾರಣಗಳು ಇಲ್ಲಿವೆ ನೋಡಿ
ಬ್ಯಾಟಿಂಗ್: ರವೀಂದ್ರ ಜಡೇಜಾ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸುದೀರ್ಘ ಇನ್ನಿಂಗ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ರಣಜಿಯಲ್ಲಿ ಎರಡು ತ್ರಿಶತಕ ಬಾರಿಸಿರುವ ಜಡ್ಡು, ODI-T20 ನಲ್ಲಿ ಅವರು ಪರಿಸ್ಥಿತಿಗೆ ಅನುಗುಣವಾಗಿ ಹುರುಪಿನಿಂದ ಬ್ಯಾಟ್ ಮಾಡುತ್ತಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ ಸ್ಟ್ರೈಕ್ ರೇಟ್ 125ರ ಆಸುಪಾಸಿನಲ್ಲಿದೆ. ಐಪಿಎಲ್‌ನಲ್ಲಿ, ಅವರು 128 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
ಇದುವರೆಗೆ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಮಾತ್ರ ಸಿಎಸ್‌ಕೆಗೆ ನಾಯಕರಾಗಿದ್ದರು. ಇಬ್ಬರೂ ಭಾರತೀಯ ಆಟಗಾರರು. ಚೆನ್ನೈನಲ್ಲಿ ಮೊಯಿನ್ ಅಲಿ ಮತ್ತು ಡ್ವೇನ್ ಬ್ರಾವೋ ಅವರಂತಹ ಹಿರಿಯ ಆಟಗಾರರೂ ಇದ್ದಾರೆ, ಆದರೆ ಫ್ರಾಂಚೈಸ್ ಭಾರತೀಯ ಆಟಗಾರನನ್ನೇ ಈ ಬಾರಿಯೂ ನಾಯಕನನ್ನಾಗಿ ಮಾಡಿದೆ. ಇನ್ನು, ಜಡೇಜಾಗೆ ಕೇವಲ 33 ವರ್ಷ. ಅವರು ಅಲಿ-ಬ್ರಾವೋಗಿಂತ ಕಿರಿಯರು. ಹೀಗಾಗಿ ಜಡ್ಡು ಮುಂದಿನ ಕೆಲವು ವರ್ಷಗಳವರೆಗೆ ಸುಲಭವಾಗಿ ನಾಯಕರಾಗಿರಬಹುದು.