Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

ಏಷ್ಯಾಕಪ್​ 2022 ಆರಂಬಗೊಳ್ಳಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಶಕೀಬ್ ಅಲ್ ಹಸನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

First published:

  • 18

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಭಾರತದ ರವೀಂದ್ರ ಜಡೇಜಾ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಏಷ್ಯಾಕಪ್ ಇತಿಹಾಸದಲ್ಲಿ ಹೊಸ ದಾಖಲೆ ಮಾಡಲು ಸಿದ್ಧರಾಗಿದ್ದಾರೆ. ಏಷ್ಯಾ ಕಪ್ 2022 ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ. ಭಾರತ ಮತ್ತು ಬಾಂಗ್ಲಾದೇಶ ಈ ಟೂರ್ನಿಗೆ ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿವೆ.

    MORE
    GALLERIES

  • 28

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಶ್ರೀಲಂಕಾದ ಲಸಿತ್ ಮಾಲಿಂಗ ಅವರು 15 ಪಂದ್ಯಗಳಿಂದ 4.70 ಎಕಾನಮಿಯಲ್ಲಿ ಏಷ್ಯಾ ಕಪ್​ನಲ್ಲಿಯೇ ಬರೋಬ್ಬರಿ 33 ವಿಕೆಟ್​ ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ.

    MORE
    GALLERIES

  • 38

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಪ್ರಸ್ತುತ ಐದನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ನಾಯಕ ಇದುವರೆಗೆ 18 ಪಂದ್ಯಗಳಲ್ಲಿ 5.05 ಎಕಾನಮಿ ದರದಲ್ಲಿ 24 ವಿಕೆಟ್ ಪಡೆದಿದ್ದಾರೆ.

    MORE
    GALLERIES

  • 48

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಶಕೀಬ್ ಇತ್ತೀಚೆಗೆ ಬಾಂಗ್ಲಾದೇಶದ ಟಿ 20 ಅಂತಾರಾಷ್ಟ್ರೀಯ ನಾಯಕರಾಗಿ ಆಯ್ಕೆ ಆಗಿದ್ದಾರೆ. ಮಾಲಿಂಗ ಅವರನ್ನು ಸೋಲಿಸಲು ಅವರು ಟೂರ್ನಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಬೇಕಿದೆ.

    MORE
    GALLERIES

  • 58

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಮತ್ತೊಂದೆಡೆ ರವೀಂದ್ರ ಜಡೇಜಾ ಏಷ್ಯಾಕಪ್ ನಲ್ಲಿ 22 ವಿಕೆಟ್ ಪಡೆದಿದ್ದಾರೆ. ಲಸಿತ್ ಮಾಲಿಂಗ ದಾಖಲೆ ಮುರಿಯಲು ಅವರಿಗೆ 12 ವಿಕೆಟ್‌ಗಳ ಅಗತ್ಯವಿದೆ. ಜಡೇಜಾ ಪ್ರಸ್ತುತ ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮೊರ್ತಜಾಗಿಂತ ಕೆಳಗಿನ ಪಟ್ಟಿ ಅಂದರೆ ಎಂಟನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    2022 ರ ಏಷ್ಯಾ ಕಪ್‌ನಲ್ಲಿ ಭಾರತದ ಅಭಿಯಾನವು ಆಗಸ್ಟ್ 28ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲಿದೆ.

    MORE
    GALLERIES

  • 78

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಬಾಂಗ್ಲಾದೇಶ ತಂಡವು ಏಷ್ಯಾಕಪ್​ ನಲ್ಲಿ ಆಗಸ್ಟ್ 30ರಂದು ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಭಾರತ ಏಳು ಬಾರಿ ಏಷ್ಯಾಕಪ್ ಗೆದ್ದಿದ್ದರೆ, ಬಾಂಗ್ಲಾದೇಶ ಇನ್ನೂ ಟ್ರೋಫಿ ಗೆದ್ದಿಲ್ಲ.

    MORE
    GALLERIES

  • 88

    Asia Cup 2022: ಮಾಲಿಂಗ ದಾಖಲೆ ಮೇಲೆ ಜಡೇಜಾ-ಶಕೀಬ್‌ ಕಣ್ಣು, ಈ ಸಾಧನೆ ಮಾಡ್ತಾರಾ ಜಡ್ಡು?

    ಏಷ್ಯಾ ಕಪ್​ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

    MORE
    GALLERIES