ರವಿಚಂದ್ರನ್ ಅಶ್ವಿನ್ ಮತ್ತು ಪ್ರೀತಿ ನಾರಾಯಣ್ ಮದುವೆಯ ಮೊದಲ ರಾತ್ರಿಯಂದು ಟೀಂ ಇಂಡಿಯಾ ಆಟಗಾರರು ಸ್ಪಿನ್ನರ್ ಕೊಠಡಿಯಲ್ಲಿ ಅಲಾರಂಗಳನ್ನು ಬಚ್ಚಿಟ್ಟಿದ್ದರು. ಈ ಅಲಾರಾಂಗಳು ಇಡೀ ರಾತ್ರಿ ರಿಂಗಣಿಸುತ್ತಿದ್ದವು, ಇದರಿಂದಾಗಿ ಅಶ್ವಿನ್ ಮತ್ತು ಪ್ರೀತಿ ಇಡೀ ರಾತ್ರಿ ಎಚ್ಚರವಾಗಿರಬೇಕಾಯಿತು. ಆದರೆ, ಮರುದಿನ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಇದರಿಂದಾಗಿ ಅಶ್ವಿನ್ ಪಾರಾದರು. ಇಲ್ಲವಾದರೆ ರಾತ್ರಿಯಿಡೀ ಜಾಗರಣೆ ಮಾಡಿ ಮರುದಿನ ಬೌಲಿಂಗ್ ಮಾಡಬೇಕಾದರೆ ಅವರಿಗೆ ತುಂಬಾ ಕಷ್ಟವಾಗುತ್ತಿತ್ತು ಎಂದು ಅವರ ಪತ್ನಿ ಹೇಳಿಕೊಂಡಿದ್ದಾರೆ.
ಶಾಲಾ ಸ್ನೇಹದ ನಂತರ ಅಶ್ವಿನ್ ಮತ್ತು ಪ್ರೀತಿ ಒಟ್ಟಿಗೆ ಒಂದೇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಇವರಿಬ್ಬರ ಸ್ನೇಹ ಕಾಲೇಜಿನಲ್ಲಿ ಪ್ರೀತಿಗೆ ತಿರುಗಿತ್ತು. ಕಾಲೇಜು ದಿನಗಳಲ್ಲಿ ಇಬ್ಬರೂ ಸಾಕಷ್ಟು ಡೇಟಿಂಗ್ ಮಾಡುತ್ತಿದ್ದರು. ಪ್ರೀತಿ ಮತ್ತು ಅಶ್ವಿನ್ ಕುಟುಂಬಗಳು ಇದನ್ನು ಮೊದಲೇ ತಿಳಿದಿದ್ದವು. ಹೀಗಿರುವಾಗ ಇವರಿಬ್ಬರ ಪ್ರೇಮಕಥೆಗೆ ಯಾವುದೇ ಅಡ್ಡಿ ಇರಲಿಲ್ಲ.