2019ರ ವಿಶ್ವಕಪ್‌ನ ಸೆಮಿಫೈನಲ್‌ನ ಸೋಲಿನ ನಂತರ ಎಲ್ಲರೂ ನಿರಾಶೆಗೊಂಡಿದ್ದರು ಎಂದು ಆರ್ ಶ್ರೀಧರ್ ಬರೆದಿದ್ದಾರೆ. ಡ್ರೆಸ್ಸಿಂಗ್ ರೂಮ್ ಬಗ್ಗೆಯೂ ಹಲವು ರೀತಿಯ ಸುದ್ದಿಗಳು ಬರುತ್ತಿದ್ದವು. ಆ ವೇಳೆ ರೋಹಿತ್ ಕ್ಯಾಂಪ್ ಮತ್ತು ವಿರಾಟ್ ಕ್ಯಾಂಪ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಅನ್‌ಫಾಲೋ ಮಾಡಿದ್ದಾರೆ. ಇಂತಹ ವಿಷಯಗಳೂ ಮುನ್ನೆಲೆಗೆ ಬರುತ್ತಿದ್ದವು.
2021ರ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟಿ20 ತಂಡದ ನಾಯಕತ್ವ ತೊರೆದಿದ್ದು ಗೊತ್ತೇ ಇದೆ. ಇದಾದ ಬಳಿಕ ಬಿಸಿಸಿಐ ಅವರನ್ನು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿತ್ತು. ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ಸೋಲಿನ ನಂತರ ವಿರಾಟ್ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಇದಾದ ನಂತರ ರೋಹಿತ್ ಶರ್ಮಾ ಎಲ್ಲಾ ಮೂರು ಮಾದರಿಗಳ ನಾಯಕತ್ವವನ್ನು ಪಡೆದರು.