ಒಮ್ಮೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಲೈವ್ ಸೆಷನ್ ಮಾಡಿದಾಗ, ಅವರ ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎಂದು ಕೇಳಿದ್ದರು. ಈ ವೇಳೆ ಉತ್ತರಿಸಿದ ರಶ್ಮಿಕಾ, ‘ಈ ಸಲ ಕಪ್ ನಮ್ದೆ’ ಅಂದರೆ ‘ಈ ವರ್ಷ ಕಪ್ ನಮ್ಮದಾಗುತ್ತೆ’ ಎಂದು ಕನ್ನಡದಲ್ಲಿ ಉತ್ತರಿಸುವ ಮೂಲಕ RCB ತಂಡ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.