ಹಾಗಾಗಿ ಬ್ಯಾಟ್ ಹಿಡಿಯಲೂ ಸಾಧ್ಯವಾಗಲಿಲ್ಲ. ಸ್ಕ್ಯಾನ್ ಮಾಡಿದ ನಂತರ, ಮೂಳೆ ಮುರಿತ ಕಂಡುಬಂದಿದೆ. ಅವರು ಬ್ಯಾಟಿಂಗ್ ಮಾಡುವುದು ಅನುಮಾನವಾಗಿತ್ತು. ಆದರೆ ಈ ಸಮಯದಲ್ಲಿ ಹನುಮ ವಿಹಾರಿ ಯಾರೂ ಮಾಡದಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ಬ್ಯಾಟ್ ಹಿಡಿದು ಮೈದಾನ ಪ್ರವೇಶಿಸಿದರು. ಬಲಗೈ ಬ್ಯಾಟಿಂಗ್ ಮಾಡಲು ಸಾಧ್ಯವಾಗದ ವಿಹಾರಿ ಎಡಗೈ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಿದ್ದರು.
ವಿಹಾರಿ ಹೋರಾಟಗಳಲ್ಲಿ ಹೊಸದೇನಲ್ಲ. ಅವರು ಈ ಹಿಂದೆ ಮಂಡಿರಜ್ಜು ಗಾಯದಿಂದ ಬ್ಯಾಟಿಂಗ್ ಮಾಡಿದ್ದರು. 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ, ಗಾಯಗೊಂಡಿದ್ದರೂ ಸಹ ಬ್ಯಾಟಿಂಗ್‌ಗೆ ಇಳಿದ ವಿಹಾರಿ, ಟೀಂ ಇಂಡಿಯಾ ತಂಡ ಪಂದ್ಯವನ್ನು ಡ್ರಾ ಮಾಡುವಲ್ಲಿ ಸಹಾಯಕರಾಗಿದ್ದರು. ಆದರೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಗಾರರು ವಿಹಾರಿ ಅವರನ್ನು ಕಡೆಗಣಿಸಿದ್ದಾರೆ.