ಕೇದಾರ್ ಜಾಧವ್ ಅವರ ವೃತ್ತಿಜೀವನ ಮುಗಿಯಿತು ಎಂದುಕೊಂಡಾಗ ಅವರು ತಮ್ಮ ಬ್ಯಾಟಿಂಗ್ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಅಸ್ಸಾಂ ಜೊತೆಗಿನ ರಣಜಿ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆಡಿದ ಕೇದಾರ್ ಜಾಧವ್ 283 ಎಸೆತಗಳಲ್ಲಿ 21 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ 283 ರನ್ ಗಳಿಸಿದರು. ನಿಖರವಾಗಿ 100ರ ಸ್ಟ್ರೈಕ್ ರೇಟ್ ಕಾಯ್ದುಕೊಂಡ ಕೇದಾರ್ ಜಾಧವ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 15ನೇ ಶತಕ ದಾಖಲಿಸಿದರು.