ರ್ಯಾಲಿ ರೇಸರ್ ಮತ್ತು ಹೂನಿಗನ್ ಸಹ-ಸಂಸ್ಥಾಪಕ ಕೆನ್ ಬ್ಲಾಕ್ ಹಿಮವಾಹನ ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರ ಸಾವಿಗೆ ಕ್ರೀಡಾ ಲೋಕದ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
2/ 8
ಕೆನ್ ಬ್ಲಾಕ್ ಅವರಿಗೆ 55 ವರ್ಷ ವಯಸ್ಸಾಗಿತ್ತು. ಕೆನ್ ಒಬ್ಬ ದಾರ್ಶನಿಕ, ಪ್ರವರ್ತಕ ಮತ್ತು ಐಕಾನ್ ಆಗಿದ್ದರು. ಕಡಿದಾದ ಇಳಿಜಾರಿನಲ್ಲಿ ಹಿಮವಾಹನವನ್ನು ಓಡಿಸುತ್ತಿದ್ದಾಗ ಸಮತೋಲನ ತಪ್ಪಿ ಕೆನ್ ಕಾರು ಅಪಘಾತವಾಗಿದ್ದು, ಸಾವನ್ನಪ್ಪಿದ್ದಾರೆ.
3/ 8
2005 ರಲ್ಲಿ USA ನ ರ್ಯಾಲಿ ಅಮೇರಿಕಾ ಸರಣಿಯಲ್ಲಿ ತನ್ನ ರೇಸಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, ನಂತರ ವಿಶ್ವ ರ್ಯಾಲಿ ಚಾಂಪಿಯನ್ಶಿಪ್ನಲ್ಲಿ ಕಾಣಿಸಿಕೊಂಡರು. ಅಲ್ಲದೇ FIA ವರ್ಲ್ಡ್ ರ್ಯಾಲಿ ಕ್ರಾಸ್ ಚಾಂಪಿಯನ್ಶಿಪ್ಗಳಲ್ಲಿ ಸಹ ಭಾಗವಹಿಸಿದ್ದರು.
4/ 8
2021 ರಲ್ಲಿ, ಬ್ಲಾಕ್ ಎಲೆಕ್ಟ್ರಿಕ್ ಚಲನಶೀಲತೆಯ ಮೇಲೆ ಕೇಂದ್ರೀಕರಿಸುವ ಯೋಜನೆಗಳ ಸರಣಿಗಾಗಿ ಆಡಿ ಕಂನಿ ಜೊತೆ ಕೈ ಜೋಡಿಸಿದ್ದರು. ಅಲ್ಲದೇ ಇವರ ರ್ಯಾಲಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದವು.
5/ 8
ಕೆನ್ ಬ್ಲಾಕ್ ಕಾರನ್ನು ಡ್ರಿಫ್ಟಿಂಗ್ ಮಾಡುವ ಕಲೆಯಲ್ಲಿ ನಿಪುಣರಾಗಿದ್ದರು. ಇವರ ಈ ಕಲೆಗೆ ಅನೇಕ ಅಭಿಮಾನಿಗಳನ್ನೂ ಸಹ ಹೊಂದಿದ್ದರು.
6/ 8
ನಂತರ ಅವರು ಪ್ರಸಿದ್ಧ ಕಾರ್ ಟೆಲಿವಿಷನ್ ಶೋ 'ಟಾಪ್ ಗೇರ್' ನಲ್ಲಿ ಕಾಣಿಸಿಕೊಂಡಿದ್ದರು. ಟಾಪ್ ಗೇರ್ನಲ್ಲಿ ಅವರ ಎಪಿಸೋಡ್ ಅಂದಿನ ಸಮಯದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಆಗಿತ್ತು.
7/ 8
ಕಳೆದ ವರ್ಷ ಜೇ ಲೆನೋ ಅವರು ಮಾರಣಾಂತಿಕ ಕಾರು ಅಪಘಾತಕ್ಕೆ ಒಳಗಾಗಿದ್ದರು ಈ ಅಪಘಾತದ ಬಳಿಕ ಇದೀಗ ಕೆನ್ ಅವರ ಅಪಘಾತ ರೇಸರ್ಗಳಲ್ಲಿ ಬೇಸರವನ್ನು ತರಿಸಿದೆ.
8/ 8
ಇನ್ನು, ಡಿಸೆಂಬರ್ 30ರ 2022ರಂದು ಖ್ಯಾತ ಟಈಂ ಇಂಡಿಯಾ ಆಟಗಾರ ರಿಷಭ್ ಪಂತ್ ಸಹ ಕಾರು ಅಪಘಾತಕ್ಕೆ ಒಳಗಾಗಿದ್ದರು. ಆದರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.