IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

IPL 2023: ಜೈಸ್ವಾಲ್ ಆಡಿದ ರೀತಿಗೆ ಐಪಿಎಲ್ ಅಭಿಮಾನಿಗಳೆಲ್ಲ ಫಿದಾ ಆಗಿದ್ದಾರೆ. ಇದರ ನಡುವೆ ಅಭಿಮಾನಿಗಳು ಜೈಸ್ವಾಲ್ ಟೀಂ ಇಂಡಿಯಾಗೆ ಆದಷ್ಟು ಬೇಗ ಎಂಟ್ರಿಕೊಡಬಹುದು ಎಂದು ಹೇಳುತ್ತಿದ್ದಾರೆ.

First published:

  • 110

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಪ್ಲೇ-ಆಫ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ್​ ತಂಡವು ರೋಚಕ ಜಯ ದಾಖಲಿಸಿತು. ಬಟ್ಲರ್ ಅವರಂತಹ ಸ್ಟಾರ್ ಆಟಗಾರ ಬೃಹತ್ ಗುರಿಯಲ್ಲಿ ಡಕ್ ಆಗಿದ್ದರೂ ಜೈಸ್ವಾಲ್​​ ಅತ್ಯುತ್ತಮ ಆಟದಿಂದ ತಂಡಕ್ಕೆ ಸಹಾಯವಾಯಿತು.

    MORE
    GALLERIES

  • 210

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಮತ್ತೊಬ್ಬ ಹುಡುಗ ದೇವದತ್ ಪಡಿಕ್ಕಲ್ ಜೊತೆಗೂಡಿ ರೋಚಕ ಇನ್ನಿಂಗ್ಸ್ ಆಡಿದರು. ಯಶಸ್ವಿ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆಕ್ರಮಣಕಾರಿ ಆಟವಾಡುವ ಯಶಸ್ವಿ, ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಶೈಲಿ ಬದಲಿಸಿಕೊಂಡು ತಂಡಕ್ಕೆ ಆಸರೆಯಾದರು. ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟವನ್ನು ರಚಿಸಿದರು.

    MORE
    GALLERIES

  • 310

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ರಾಜಸ್ಥಾನ್ ರಾಯಲ್ಸ್ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಜೈಸ್ವಾಲ್ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ ಇದೀಗ ಅವರು ಭರ್ಜರಿ ಫಾರ್ಮ್​ನಲ್ಲಿದ್ದಾರೆ.

    MORE
    GALLERIES

  • 410

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಈ ಋತುವಿನಲ್ಲಿ, ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. 14 ಪಂದ್ಯಗಳನ್ನಾಡಿರುವ ಯಶಸ್ವಿ 625 ರನ್ ಗಳಿಸಿ ಧೂಳೆಬ್ಬಿಸಿದ್ದಾರೆ. ಇದರಲ್ಲಿ 1 ಶತಕವಿದೆ. ಅವರ ಖಾತೆಯಲ್ಲಿ 5 ಅರ್ಧ ಶತಕಗಳಿವೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಫಾಫ್ ಡುಪ್ಲೆಸಿಸ್ 702 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

    MORE
    GALLERIES

  • 510

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಬಟ್ಲರ್ ಈ ಅರ್ಧಶತಕದ ಮೂಲಕ ಹಲವು ದಾಖಲೆಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಜೈಸ್ವಾಲ್ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್ ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಅದಲ್ಲದೆ, ಬಟ್ಲರ್ ನಂತರ ರಾಜಸ್ಥಾನ್ ರಾಯಲ್ಸ್ ಪರ 600ಕ್ಕೂ ಹೆಚ್ಚು ರನ್ ಗಳಿಸಿದವರು ಯಶಸ್ವಿ ಅವರು. ಕಳೆದ ಋತುವಿನಲ್ಲಿ ಬಟ್ಲರ್ 863 ರನ್ ಗಳಿಸಿದ್ದು ಗೊತ್ತೇ ಇದೆ.

    MORE
    GALLERIES

  • 610

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಈ ಋತುವಿನಲ್ಲಿ ಬೌಂಡರಿಗಳ ವಿಷಯದಲ್ಲಿ ಜೈಸ್ವಾಲ್ ಒಟ್ಟು 82 ಬೌಂಡರಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಗಿಲ್ 62 ಬೌಂಡರಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಕೂಡ ಈ ಋತುವಿನಲ್ಲಿ 26 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

    MORE
    GALLERIES

  • 710

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಯಶಸ್ವಿ ಜೈಸ್ವಾಲ್ U19 ವಿಶ್ವಕಪ್ 2020 ಮೂಲಕ IPL ಪ್ರವೇಶಿಸಿದ ಹುಡುಗ. ಅಂದಿನಿಂದ, ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಪ್ರೋತ್ಸಾಹಿಸುತ್ತಿದೆ. ಆ ನಂಬಿಕೆಯನ್ನು ಜೀವಂತವಾಗಿರಿಸಿಕೊಂಡು ಜೈಸ್ವಾಲ್ 2023ರ ಋತುವಿನಲ್ಲಿ ಶತಕ ಸಿಡಿಸಿದ್ದರು.

    MORE
    GALLERIES

  • 810

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಮುಂಬೈನ ಬಡ ಕುಟುಂಬದಿಂದ ಬಂದ ಯಶಸ್ವಿ ಜೈಸ್ವಾಲ್ ಅವರು 19 ವರ್ಷದೊಳಗಿನವರ ವಿಶ್ವಕಪ್‌ಗೆ ಮೊದಲು ಅವರು ಕಷ್ಟದಿಂದ ಈ ಮಟ್ಟಕ್ಕೆ ಬಂದು ತಲುಪಿದ್ದಾರೆ. ಇದೀಗ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ.

    MORE
    GALLERIES

  • 910

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಈಗಾಗಲೇ ಶತಕ ಸಿಡಿಸಿರುವ ಯಶಸ್ವಿ ಜೈಸ್ವಾಲ್, ರಣಜಿ ಟ್ರೋಫಿ, ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ. ಭಾರತ ಎ ತಂಡದ ಪರ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಐಪಿಎಲ್ ಶತಕದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

    MORE
    GALLERIES

  • 1010

    IPL 2023: ದಾಖಲೆಗಳ ಬೇಟೆಯಾಡುತ್ತಿರುವ ಜೈಸ್ವಾಲ್​, ಟೀಂ ಇಂಡಿಯಾ ಎಂಟ್ರಿ ಖಚಿತ ಎಂ ಫ್ಯಾನ್ಸ್!

    ಜೈಸ್ವಾಲ್ ಆಡಿದ ರೀತಿಗೆ ಐಪಿಎಲ್ ಅಭಿಮಾನಿಗಳೆಲ್ಲ ಫಿದಾ ಆಗಿದ್ದಾರೆ. ಇದರ ನಡುವೆ ಅಭಿಮಾನಿಗಳು ಜೈಸ್ವಾಲ್ ಟೀಂ ಇಂಡಿಯಾಗೆ ಆದಷ್ಟು ಬೇಗ ಎಂಟ್ರಿಕೊಡಬಹುದು ಎಂದು ಹೇಳುತ್ತಿದ್ದಾರೆ.

    MORE
    GALLERIES