ಕೊರೋನಾ ಆತಂಕದ ನಡುವೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿವೆ. ಈಗಾಗಲೇ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಹಾಗೂ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಯಶಸ್ವಿಯಾಗಿ ಮುಗಿದಿದೆ. ಇದರ ನಡುವೆ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯುವುದು ಕೂಡ ಖಚಿತವಾಗಿದೆ. ಇದರ ನಡುವೆ ದೇಸಿ ಅಂಗಳದ ಮದಗಜಗಳ ಕಾಳಗ ಎಂದೇ ಪ್ರಖ್ಯಾತಿ ಹೊಂದಿರುವ ಪ್ರೋ ಕಬಡ್ಡಿ ಲೀಗ್ ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಕಳೆದ ವರ್ಷ ಕೊರೋನಾ ಕಾರಣದಿಂದ ಪ್ರೋ ಕಬಡ್ಡಿ ಲೀಗ್ ನಡೆದಿರಲಿಲ್ಲ. ಇದಾಗ್ಯೂ ಈ ಸಲ ನಡೆಸುವುದಾಗಿ ಆಯೋಜಕರು ತಿಳಿಸಿದ್ದರು. ಅದರಂತೆ ಏಪ್ರಿಲ್ನಲ್ಲಿ ಬಿಡ್ಡಿಂಗ್ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ಸಲ ಕೂಡ ಕೊರೋನಾ ಕಾರಣದಿಂದ ಟೂರ್ನಿ ಆಯೋಜನೆಗೆ ಅಡ್ಡಿಯಾಗಿದೆ. ಇದಾಗ್ಯೂ ಈಗ ಟೂರ್ನಿಯನ್ನು ಆಯೋಜಿಸಲು ಬೇಕಾದ ಪ್ರಾರಂಭಿಕ ಸಿದ್ಧತೆಗಳು ಶುರುವಾಗಿದೆ.