37 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ 2022ರಲ್ಲಿ ಅದ್ಭುತ ಪ್ರದರ್ಶನದ ನಂತರ 35 ತಿಂಗಳ ನಂತರ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದರು. ಡಿಕೆ ಶೀಘ್ರದಲ್ಲೇ ಫಿನಿಶರ್ ಆಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದಾದ ಬಳಿಕ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದರು. ವಿಶ್ವಕಪ್‌ನಲ್ಲಿ ವಿಶೇಷ ಪ್ರದರ್ಶನ ನೀಡಲಿಲ್ಲ. ಹೀಗಾಗಿ ದಿನೇಶ್ ಕಾರ್ತಿಕ್ ಯಾವುದೇ ಸಮಯದಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬಹುದು.
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಲಗೈ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 26 ಟೆಸ್ಟ್, 94 ODI ಮತ್ತು 60 T20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಮತ್ತು 7 ಅರ್ಧ ಶತಕಗಳೊಂದಿಗೆ 1025 ರನ್ ಗಳಿಸಿದ್ದಾರೆ, ಆದರೆ 94 ODIಗಳಲ್ಲಿ, ಕಾರ್ತಿಕ್ 9 ಅರ್ಧ ಶತಕಗಳೊಂದಿಗೆ 1752 ರನ್ ಗಳಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಅನುಭವಿ ವಿಕೆಟ್‌ಕೀಪರ್ 142.61 ಸ್ಟ್ರೈಕ್ ರೇಟ್‌ನಲ್ಲಿ 686 ರನ್ ಗಳಿಸಿದ್ದಾರೆ. ಕಾರ್ತಿಕ್ ಅವರು ಆಗಸ್ಟ್ 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರಳುವುದು ಈಗ ತುಂಬಾ ಕಷ್ಟಕರವಾಗಿದೆ. 34 ವರ್ಷದ ಇಶಾಂತ್ ಕೊನೆಯ ಬಾರಿಗೆ ನವೆಂಬರ್ 2021 ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. 'ಲಂಬು' ಎಂದೇ ಖ್ಯಾತರಾಗಿರುವ ಅವರು, sದ್ಯ ಕ್ರಿಕೆಟ್ನಿಂದ ದೂರವಿದ್ದಾರೆ. ಹೆಚ್ಚುತ್ತಿರುವ ವಯಸ್ಸಿನ ಜೊತೆಗೆ ಇಶಾಂತ್‌ಗೆ ಸಾಕಷ್ಟು ಫಿಟ್‌ನೆಸ್ ಸಮಸ್ಯೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ಯಾವಾಗ ಬೇಕಾದರೂ ಕ್ರಿಕೆಟ್ ಗೆ ವಿದಾಯ ಹೇಳಬಹುದು.
ಇಶಾಂತ್ 105 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದಾರೆ. ಜೊತೆಗೆ 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್ ಪಡೆದಿದ್ದಾರೆ. ಇಶಾಂತ್ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿದ್ದಾರೆ. 2007 ರಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದ ಇವರು, 23 ಜನವರಿ 2016 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ODI ಆಡಿದರು, ಅವರು ಕೊನೆಯ ಬಾರಿಗೆ T20 ಕ್ರಿಕೆಟ್‌ನಲ್ಲಿ ಅಕ್ಟೋಬರ್ 2013 ರಲ್ಲಿ ಕಾಣಿಸಿಕೊಂಡಿದ್ದರು.
31 ವರ್ಷದ ಬ್ಯಾಟರ್ ಕರುಣ್ ನಾಯರ್ ಹೆಸರು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಕರುಣ್ ನಾಯರ್. ವೀರೇಂದ್ರ ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕರುಣ್ ಪಾತ್ರರಾಗಿದ್ದಾರೆ. ಆದರೆ ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ.
40 ವರ್ಷದ ಅಮಿತ್ ಮಿಶ್ರಾ 22 ಟೆಸ್ಟ್‌ಗಳಲ್ಲಿ 76 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ 36 ಏಕದಿನ ಪಂದ್ಯಗಳಲ್ಲಿ 64 ವಿಕೆಟ್ ಪಡೆದಿದ್ದಾರೆ. ಮಿಶ್ರಾ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಅಮಿತ್ ಮಿಶ್ರಾ ತಮ್ಮ ಅಮೋಘ ಬೌಲಿಂಗ್ ಮೂಲಕ ಹಲವು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದಾರೆ. ಅವರು ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದಾರೆ. ಈಗ ಅವರ ವಾಪಸಾತಿ ಬಹುತೇಕ ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಮಿಶ್ರಾ ಯಾವಾಗ ಬೇಕಾದರೂ ಕ್ರಿಕೆಟ್‌ಗೆ ಗುಡ್ ಬೈ ಹೇಳಬಹುದು.
2008 ರಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದ ಅಮಿತ್ ಮಿಶ್ರಾ ಅವರು ಡಿಸೆಂಬರ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು, ಆದರೆ ಅವರು ಕೊನೆಯದಾಗಿ ODI ಕ್ರಿಕೆಟ್‌ನಲ್ಲಿ ಅಕ್ಟೋಬರ್ 2016 ರಲ್ಲಿ ಕಾಣಿಸಿಕೊಂಡರು. ಮಿಶ್ರಾ ಕೊನೆಯ ಬಾರಿಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫೆಬ್ರವರಿ 2017 ರಲ್ಲಿ ಕಾಣಿಸಿಕೊಂಡಿದ್ದರು.