Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಷ್ಯಾಕಪ್​ 2022ರಲ್ಲಿ ಭರ್ಜರಿ ಪೈಪೋಟಿ ನಡೆಯಲಿದೆ. ಈಗಾಗಲೇ ಆಗಸ್ಟ್ 28ರಂದು ಇಂಡೋ -ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಇದರ ನಡುವೆ ಪಾಕ್ ತಂಡಕ್ಕೆ ದೊಡ್ಡ ಆಘಾತವೊಂದು ಉಂಟಾಗಿದೆ.

First published:

 • 18

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಏಷ್ಯಾ ಕಪ್ 2022 ಇದೇ ತಿಂಗಳ 27 ರಿಂದ ಪ್ರಾರಂಭವಾಗಲಿದೆ.ಮರುದಿನ ಅಂದರೆ 28ಕ್ಕೆ ಏಷ್ಯಾ ಕಪ್ ನಲ್ಲೇ ಬಿಗ್ ಫೈಟ್ ನಡೆಯಲಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

  MORE
  GALLERIES

 • 28

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಉಭಯ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಆದರೆ ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

  MORE
  GALLERIES

 • 38

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ವಿಶ್ವಕಪ್ ಟೂರ್ನಿಗಳಲ್ಲಿ (ODI ಮತ್ತು T20 ಸೇರಿದಂತೆ) ಭಾರತವನ್ನು ಸೋಲಿಸಿದ ಪಾಕಿಸ್ತಾನಕ್ಕೆ ಇದು ಮೊದಲ ಬಾರಿಗೆ.

  MORE
  GALLERIES

 • 48

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಎಂದರೆ 2 ದೇಶಗಳ ಕ್ರಿಕೆಟ್​ ಅಭಿಮಾನಿಗಳು ಬಹಳಷ್ಟು ಕಾತುರತೆಯಿಂದ ಕಾಯುತ್ತಿರುತ್ತಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕ್ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ.

  MORE
  GALLERIES

 • 58

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವಿನಲ್ಲಿ ಬೌಲರ್ ಶಾಹೀನ್ ಅಫ್ರಿದಿ ಪ್ರಮುಖ ಪಾತ್ರ ವಹಿಸಿದ್ದರು. 3 ವಿಕೆಟ್‌ಗಳೊಂದಿಗೆ ಭಾರತದ ಅಗ್ರ ಕ್ರಮಾಂಕವನ್ನು ಚೇತರಿಸಿಕೊಳ್ಳಲಾಗದಂತೆ ಮಾಡಿದ್ದರು. ಆದರೆ, ಮೊಣಕಾಲು ನೋವಿನಿಂದಾಗಿ ಅವರು ಏಷ್ಯಾ ಕಪ್‌ನಿಂದ ಹೊರಗುಳಿಯಲಿದ್ದಾರೆ.

  MORE
  GALLERIES

 • 68

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಗಾಯದಿಂದ ಚೇತರಿಸಿಕೊಳ್ಳುವ ಉದ್ದೇಶದಿಂದ ಶಾಹೀನ್ ಅಫ್ರಿದಿಯನ್ನು ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಗಾಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಫ್ರಿದಿ ಆಡುವುದನ್ನು ಮುಂದುವರಿಸಿದರೆ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವುದಾಗಿ ವೈದ್ಯರು ಎಚ್ಚರಿಕೆ ನೀಡಿದ್ದರಿಂದ ವಿಶ್ರಾಂತಿ ನೀಡಲಾಗಿದೆ ಎಂದು ಪಾಕ್​ ಕ್ರಿಕೆಟ್​ ಮಂಡಳಿ ಅಧಿಕೃತವಾಗಿ ತಿಳಿಸಿದೆ.

  MORE
  GALLERIES

 • 78

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

  MORE
  GALLERIES

 • 88

  Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

  ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರವೂಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ದಹಾನಿ. (ಶಾಹಿನ್ ಅಫ್ರಿದಿ ಬದಲಿ ಆಟಗಾರರನ್ನು ಪಾಕ್​ ಈವರೆಗೂ ತಿಳಿಸಿಲ್ಲ)

  MORE
  GALLERIES