ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

IND vs PAK 2023: ಏಷ್ಯಾ ಕಪ್ 2023ಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಜಗಳ ಇನ್ನೂ ನಡೆಯುತ್ತಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಬಾಂಗ್ಲಾದೇಶದಲ್ಲಿ ತಮ್ಮ 2023 ODI ವಿಶ್ವಕಪ್ ಪಂದ್ಯಗಳನ್ನು ಆಡಬಹುದು.

First published:

  • 18

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಏಷ್ಯಾಕಪ್ 2023ಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಜಗಳ ಇನ್ನೂ ನಡೆಯುತ್ತಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಭರಲಿರುವ ಏಕದಿನ ವಿಶ್ವಕಪ್​ ಕುರಿತು ಬೇರೆ ರೀತಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    MORE
    GALLERIES

  • 28

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಹೌದು, ಏಕದಿನ ವಿಶ್ವಕಪ್​ 2023 ಭಾರತದಲ್ಲಿ ನಡೆಯಲಿದೆ. ಹೀಗಾಗಿ ಭಾರತ ಏಷ್ಯಾಕಪ್​ಗಾಗಿ ಪಾಕಿಸ್ತಾನಕ್ಕೆ ತೆರಳದಿದ್ದರೆ, ಪಾಕಿಸ್ತಾನ ತಂಡವೂ ಸಹ ಭಾರತಕ್ಕೆ ಬರಲು ಹಿಂದೇಟು ಹಾಕಬಹುದು.

    MORE
    GALLERIES

  • 38

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಇದರಿಂದಾಗಿ ಏಕದಿನ ವಿಶ್ವಕಪ್​ನ ಪಾಕಿಸ್ತಾನ ಪಂದ್ಯಗಳು ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ನಡೆಯಬಹುದು ಎಂದು ವರದಿಯಾಗಿದೆ. ಇದರಿಂದಾಗಿ ಪಾಕ್​ ವಿಶ್ವಕಪ್ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡುವ ಸಾಧ್ಯತೆಯಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್​ ನಡೆಯಲಿದೆ.

    MORE
    GALLERIES

  • 48

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಕಳೆದ ವರ್ಷ, BCCI ಕಾರ್ಯದರ್ಶಿ ಜಯ್ ಶಾ ಅವರು ಏಷ್ಯಾಕಪ್ 2023 ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಜಯ್​ ಶಾ, ಏಚ್ಯಾಕಪ್​ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ.

    MORE
    GALLERIES

  • 58

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಇನ್ನು, ಭಾರತ ಮತ್ತು ಪಾಕಿಸ್ತಾನವು 2012-13 ರಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಪರಸ್ಪರ ಆಡಿಲ್ಲ ಮತ್ತು ಮೆನ್ ಇನ್ ಬ್ಲೂ ಕೊನೆಯದಾಗಿ 2008 ರಲ್ಲಿ ನೆರೆಯ ರಾಷ್ಟ್ರಕ್ಕೆ ಭೇಟಿ ನೀಡಿತ್ತು. ಬಳಿಕ ಉಭಯ ತಂಡಗಳು ಐಸಿಸಿ ಟ್ರೂನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿದೆ.

    MORE
    GALLERIES

  • 68

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಕೆಲ ವರದಿ ಪ್ರಕಾರ 2023 ODI ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಿ ನವೆಂಬರ್ 19 ರಂದು 46 ದಿನಗಳ ಅವಧಿಯಲ್ಲಿ 48 ಪಂದ್ಯಗಳನ್ನು ಆಡಲಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ WC ಪಂದ್ಯಗಳನ್ನು ಆಯೋಜಿಸಲು ಒಟ್ಟು 12 ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್‌ಗೆ ಆತಿಥ್ಯ ವಹಿಸಲಿದೆ.

    MORE
    GALLERIES

  • 78

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ಐಸಿಸಿ ಸಾಮಾನ್ಯವಾಗಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ದೃಢೀಕರಿಸಿದರೂ, ಬಿಸಿಸಿಐ ನಿರ್ದಿಷ್ಟವಾಗಿ ಯಾವುದೇ ಪಂದ್ಯಗಳಿಗೆ ಸ್ಥಳಗಳನ್ನು ಅಂತಿಮಗೊಳಿಸಿಲ್ಲ. ಜೊತೆಗೆ ತೆರಿಗೆ ವಿನಾಯಿತಿ ಕುರಿತು ಭಾರತ ಸರ್ಕಾರದ ನಿಲುವಿನ ಕುರಿತು ಬಿಸಿಸಿಐ ಶೀಘ್ರದಲ್ಲೇ ಐಸಿಸಿಗೆ ಮಾಹಿತಿ ನೀಡಲಿದೆ.

    MORE
    GALLERIES

  • 88

    ICC World Cup 2023: ಪಾಕಿಸ್ತಾನಕ್ಕಾಗಿ ಏಕದಿನ ವಿಶ್ವಕಪ್ ಸ್ಥಳಾಂತರ? ಬಾಂಗ್ಲಾದಲ್ಲಿ ಇಂಡೋ-ಪಾಕ್​ ಹೈವೋಲ್ಟೇಜ್​​ ಫೈಟ್​​?

    ತೆರಿಗೆ ವಿನಾಯಿತಿಯು 2014 ರಲ್ಲಿ ಐಸಿಸಿಯೊಂದಿಗೆ ಬಿಸಿಸಿಐ ಸಹಿ ಮಾಡಿದ ಅತಿಥೇಯರ ಒಪ್ಪಂದದ ಭಾಗವಾಗಿದೆ. ಒಪ್ಪಂದದ ಪ್ರಕಾರ, ಬಿಸಿಸಿಐ ಐಸಿಸಿಗೆ (ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಅದರ ವಾಣಿಜ್ಯ ಪಾಲುದಾರರು) ತೆರಿಗೆ ವಿನಾಯಿತಿಯನ್ನು ನೀಡಬೇಕು.

    MORE
    GALLERIES