ರಾವಲ್ಪಿಂಡಿ ಎಕ್ಸ್‌ಪ್ರೆಸ್‌ನ ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಇತ್ತೀಚೆಗೆ ವಿರಾಟ್ ಫಾರ್ಮ್ ನಲ್ಲಿ ಇರದಿದ್ದಕ್ಕೆ ಮಾಜಿ ಕ್ರಿಕೆಟಿಗರು ಠೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ್ದು, ‘ವಿರಾಟ್ ಕೊಹ್ಲಿ ಒಬ್ಬ ಅಪ್ರತಿಮ ಕ್ರಿಕೆಟಿಗ ಮತ್ತು ಅವರಿಗೆ ಕನಿಷ್ಠ ಗೌರವವನ್ನು ನೀಡಬೇಕು. ಹೀಗಾಗಿ ಅವರ ಕುರಿತು ಯಾರೂ ಸಹ ಟೀಕೆ ಮಾಡುವುದನ್ನು ನಿಲ್ಲಿಸಬೇಕಿದೆ‘ ಎಂದು ಹೇಳಿದ್ದಾರೆ.