ಸ್ಕೋರ್ ವೈಫಲ್ಯ: ಸದ್ಯದ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡರಲ್ಲೂ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ. ಇದರೊಂದಿಗೆ ರೋಹಿತ್ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ರನ್ ಗಳಿಸಲು ತೊಂದರೆಯಾದರೆ ಏಕದಿನ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚೆ ನಡೆಯುವ ಸೂಚನೆಗಳಿವೆ.
ರೋಹಿತ್ ಫಿಟ್ನೆಸ್: ಆಟಗಾರರ ಫಿಟ್ನೆಸ್ ಆಧಾರದ ಮೇಲೆ ಅವರ ಪ್ರದರ್ಶನವನ್ನು ನಿರ್ಣಯಿಸುವುದು ಸರಿಯಲ್ಲ. ಆದರೆ ರೋಹಿತ್ ದೈಹಿಕವಾಗಿ ಬೆಸ್ಟ್ ಅಲ್ಲ ಎಂಬುದು ಸ್ಪಷ್ಟವಾಘಿದೆ. ಭಾರತೀಯ ನಾಯಕನ ಫೀಲ್ಡಿಂಗ್ನಲ್ಲಿ ಹಿಂದಿನ ಕ್ರಿಯಾಶೀಲತೆಯ ಕೊರತೆಯಿದೆ. ಅದೇ ಅವರ ಬ್ಯಾಟಿಂಗ್ನಲ್ಲಿ ಕಂಡುಬರುತ್ತದೆ. ಈಗ ರೋಹಿತ್ಗೆ 35 ವರ್ಷ ವಯಸ್ಸಾಗಿದೆ. ಹೀಗಾಗಿ ವಿಶ್ವಕಪ್ ವೇಳೆ ಅವರ ನಾಯಕತ್ವ ಬದಲಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.