Team India: ಟೀಂ ಇಂಡಿಯಾಗೆ ಗುಡ್ ಬೈ ಹೇಳ್ತಾರಾ ಗಬ್ಬರ್ ಸಿಂಗ್? ODI ವಿಶ್ವಕಪ್ ಆಡಲ್ವಾ ಧವನ್?
Team India: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಭಾರತ, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಆದರೆ ಈ ಸರಣಿಯಲ್ಲಿ ಧವನ್ಗೆ ಅವಕಾಶ ನೀಡಿದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.
ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾದ ಪ್ರದರ್ಶನ ಉತ್ತಮವಾಗಿಲ್ಲ. ವಿಶೇಷವಾಗಿ ODIಗಳಲ್ಲಿ ಕೆಟ್ಟ ಪ್ರದರ್ಶನ ತೋರುತ್ತಿದೆ. ಟಿ20 ವಿಶ್ವಕಪ್ ಬಳಿಕ ಎರಡೂ ಏಕದಿನ ಸರಣಿಗಳಲ್ಲಿ ಹೀನಾಯವಾಗಿ ಸೋತಿತ್ತು.
2/ 8
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಸೋತ ಭಾರತ, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನೂ ಕಳೆದುಕೊಂಡಿತ್ತು. ತಮಗಿಂತ ದುರ್ಬಲವಾಗಿದ್ದ ಬಾಂಗ್ಲಾದೇಶದ ವಿರುದ್ಧ ಸತತ ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕೈತಪ್ಪಿತು. ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದರೂ ಸಹ ಸರಣಿ ಕೈತಪ್ಪಿತ್ತು.
3/ 8
ಈ ಸರಣಿಯಲ್ಲಿ ಶಿಖರ್ ಧವನ್ ಸಂಪೂರ್ಣ ವಿಫಲರಾಗಿದ್ದರು. ಆಡಿದ ಮೂರೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು. ಒಂದೇ ಪಂದ್ಯದಲ್ಲಿ 10 ರನ್ ಗಳಿಸಲು ಸಾಧ್ಯವಾಗಲಿಲ್ಲ.
4/ 8
ಧವನ್ ಮೊದಲ ಏಕದಿನ ಪಂದ್ಯದಲ್ಲಿ 7 ರನ್, ಎರಡನೇ ಏಕದಿನದಲ್ಲಿ 8 ರನ್, ಮತ್ತು ಮೂರನೇ ಏಕದಿನದಲ್ಲಿ ಕೇವಲ 3 ರನ್ ಗಳಿಸಿದರು. ಒಟ್ಟಾರೆಯಾಗಿ, ಅವರು ಎಲ್ಲಾ ಮೂರು ODIಗಳಲ್ಲಿ 18 ರನ್ ಗಳಿಸಿದರು.
5/ 8
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 72 ರನ್ ಗಳಿಸಿದ್ದ ಧವನ್ ನಂತರದ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 3 ಮತ್ತು 28 ರನ್ ಗಳಿಸಿದ್ದರು. ಇದೀಗ ಧವನ್ ತಂಡಕ್ಕೆ ಇವರ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ.
6/ 8
ಶಿಖರ್ ಧವನ್ ಮ್ಯಾಚ್ ವಿನ್ನರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸದ್ಯ ಧವನ್ ಅವರ ಮಟ್ಟಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
7/ 8
ರೋಹಿತ್ ಶರ್ಮಾ ಗಾಯಗೊಂಡು ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು.ಅವರ ಬದಲಿಗೆ ಬಂದ ಇಶಾನ್ ಕಿಶನ್ ದ್ವಿಶತಕ ಬಾರಿಸಿದರು. ಈ ಕ್ರಮದಲ್ಲಿ, ಅಭಿಮಾನಿಗಳು ಧವನ್ ಅವರನ್ನು ತೆಗೆದುಹಾಕಿ ಮುಂದಿನ ಸರಣಿಗೆ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಆಡಬೇಕೆಂದು ಹೇಳುತ್ತಿದ್ದಾರೆ.
8/ 8
ಈ ಸರಣಿಯಲ್ಲಿ ಶಿಖರ್ ಧವನ್ ಕ್ರಿಕೆಟ್ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದಂತಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಆಡಲಿರುವ ಏಕದಿನ ಸರಣಿಗೆ ಧವನ್ ಹೆಸರನ್ನು ಆಯ್ಕೆಗಾರರು ಪರಿಗಣಿಸದಿರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಬಿಸಿಸಿಐ ಮುಂಬರಲಿರುವ ಏಕದಿನ ವಿಶ್ವಕಪ್ಗೆ ಆಯ್ಕೆ ಮಾಡುತ್ತಾರೆಯೇ ಎಂದು ಕಾದುನೋಡಬೇಕಿದೆ.