ಹೌದು, RCB ಸೋತ ನಂತರ ಈ ಫೋಟೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಈ ಫೋಟೋಗೆ ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 'ಆರ್‌ಸಿಬಿಗೆ ಸೋತಿದೆ, ಈ ಜನ್ಮದಲ್ಲಿ ನೀನು ಮದುವೆಯಾಗುವುದಿಲ್ಲ' ಎಂದು ಒಬ್ಬರು ಪೋಸ್ಟ್ ಹಾಕಿದರೆ, ಮತ್ತೊಬ್ಬರು ಆಕೆಗೆ ಮದುವೆಯಾಗಲು ಇಷ್ಟವಿಲ್ಲ. ಮದುವೆ ತಪ್ಪಿಸಲು ಈ ರೀತಿ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮಹಿಳಾ ಅಭಿಮಾನಿ ಸಖತ್ ಸದ್ದು ಮಾಡುತ್ತಿದ್ದಾರೆ. ಏನಾದರೂ ಆರ್ಸಿಬಿ ಅಭಿಮಾನಿಗಳು ತಮ್ಮ ತಂಡ ಮುಂದಿನ ಬಾರಿ ಗೆಲ್ಲಲಿದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.