ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ತಮ್ಮ ಕಾಲ್ಚಳಕದ ಆಟದಿಂದಲ್ಲ, ಬದಲಾಗಿ ತಾಯಿಯ ಪ್ರಣಯದಾಟದಿಂದ.
2/ 11
ಹೌದು, ಪ್ರೀತಿ ಕುರುಡು ಎಂಬ ಮಾತಿದೆ. ಅದು ನಿಜ ಅನ್ನುತ್ತಿದ್ದಾರೆ ನೇಮರ್ ಅವರ ತಾಯಿ ನಾಡಿನ್ ಗೋಂಕಾವ್ಸ್. ಏಕೆಂದರೆ ಇವರು ಡೇಟಿಂಗ್ ನಡೆಸುತ್ತಿರುವುದು 22ರ ಹರೆಯದ ಹುಡುಗನೊಂದಿಗೆ.
3/ 11
ಅಂದರೆ ಮಗ ನೇಮರ್ಗಿಂತ 6 ವರ್ಷ ಸಣ್ಣವನೊಂದಿಗೆ ಎಂಬುದು ಇಲ್ಲಿ ವಿಶೇಷ. 52ರ ನಾಡಿನ್ 22ರ ಟಿಯಾಗೋ ಜೊತೆ ಡೇಟಿಂಗ್ ನಡೆಸುತ್ತಿದ್ದು, ಇದು ಭಾರೀ ಸುದ್ದಿಯಾಗಿದೆ.
4/ 11
ವಿಶ್ವ ವಿಖ್ಯಾತ ಆಟಗಾರನ ತಾಯಿ ಮಗನಿಗಿಂತ ಸಣ್ಣ ಹುಡುಗನೊಂದಿಗೆ ಪ್ರೇಮದಾಟ ಎಂಬ ಹೆಡ್ಲೈನ್ಗಳು ಎಲ್ಲೆಡೆ ಹರಿದಾಡುತ್ತಿದೆ .
5/ 11
ಈ ಬಗ್ಗೆ ಮಾಧ್ಯಮವೊಂದು ನೇಮರ್ ಅವರೊಂದಿಗೆ ತಾಯಿಯ ಲವ್ ಸ್ಟೋರಿ ಬಗ್ಗೆ ಕೇಳಿದ್ದಾರೆ. ಇದಕ್ಕೆ ನೇಮರ್ ಕೂಡ ಕೂಲಾಗಿ ಉತ್ತರಿಸಿದ್ದಾರೆ. ಅದು ಅವರ ವೈಯುಕ್ತಿಕ ವಿಷಯ.
6/ 11
ತಾಯಿಯ ಡೇಟಿಂಗ್ ಬಗ್ಗೆ ನಾನೇನು ತಲೆ ಕೆಡಿಸಿಕೊಂಡಿಲ್ಲ. ನನ್ನ ಒಪ್ಪಿಗೆ ಇದೆ ಎಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ನೇಮರ್. ತಾಯಿ ಮತ್ತು ಹುಡುಗನ ಸಂಬಂಧಕ್ಕೆ ನೇಮರ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
7/ 11
ಇವೆಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ಟಿಯಾಗೋ ನೇಮರ್ ಅವರ ಅಭಿಮಾನಿಯಂತೆ. 2017 ರಲ್ಲಿ ಫುಟ್ಬಾಲ್ ತಾರೆಯನ್ನು ಭೇಟಿಯಾಗಿದ್ದ ಟಿಯಾಗೋ ನಾನು ನಿಮ್ಮ ಅಭಿಮಾನಿ, ಒಂದು ದಿನ ನಿಮ್ಮ ಪಕ್ಕದಲ್ಲಿ ನಿಂತೇ ನಿಲ್ಲುವೆ ಎಂಬ ನಂಬಿಕೆ ಇದೆ ಎಂದಿದ್ದರು.
8/ 11
ಆದರೆ ಅವತ್ತು ಟಿಯಾಗೋ ಹೇಳಿದ ಮಾತು ಅಮ್ಮನೊಂದಿಗಿನ ಡೇಟಿಂಗ್ ಮೂಲಕ ಎಂಬುದನ್ನು ನೇಮರ್ ಅಂತು ನಿರೀಕ್ಷಿಸಿರಲಿಕ್ಕಿಲ್ಲ ಅಲ್ಲವೇ..!
9/ 11
ಸದ್ಯ Paris Saint-Germain F.C.ಕ್ಲಬ್ ಪರ ಕಣಕ್ಕಿಳಿಯುತ್ತಿರುವ ಬ್ರೆಜಿಲ್ ಫುಟ್ಬಾಲ್ ತಾರೆ ನೇಮರ್ ಫಿಫಾ ವರ್ಲ್ಡ್ ರ್ಯಾಕಿಂಗ್ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.