IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

ಆರ್​ಸಿಬಿ ತಂಡ ಸೋಲುತ್ತಿದ್ದಂತೆ ಇನ್​​ಸ್ಟಾದಲ್ಲಿ ಲಕ್ನೋ ವೇಗಿ ನವೀನ್ ಉಲ್​ ಹಕ್​ ಮತ್ತೊಮ್ಮೆ ಕೆಣಕಿದ್ದು, ಇನ್​ಸ್ಟಾದಲ್ಲಿ ಪೋಸ್ಟ್​​ವೊಂದನ್ನು ಹಾಕಿ ಕಾಲೆಳೆದಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಐಪಿಎಲ್​​ನಲ್ಲಿ ಆರ್​​ಸಿಬಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಐಪಿಎಲ್​ 2023ರ ಆವೃತ್ತಿಯಲ್ಲಿ ಪ್ಲೇ ಆಫ್ಸ್​ಗೆ ಎಂಟ್ರಿ ಕೊಡಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲುಂಡಿದೆ. ಆದರೆ ಆರ್​​ಸಿಬಿ ಸೋಲನ್ನೇ ಟಾರ್ಗೆಟ್ ಮಾಡಿ ಲಕ್ನೋ ಸೂಪರ್ ಜಾಯಿಂಟ್ಸ್​​​​ ವೇಗಿ ನವೀನ್ ಹುಲ್ ಹಕ್​ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ನವೀನ್ ವಿರುದ್ಧ ಕಿರಿಕಾರಿದ್ದಾರೆ.

    MORE
    GALLERIES

  • 28

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಪ್ಲೇ ಆಫ್ ತಲುಪಲು ಆರ್‌ಸಿಬಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಆರ್‌ಸಿಬಿಯ ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದ್ದರು. ಉಳಿದಂತೆ ಮೈಕಲ್ ಬ್ರೇಸ್ ವೆಲ್ (29) ಮತ್ತು ಅನುಜ್ ರಾವತ್ ಅಜೇಯವಾಗಿ 25 ರನ್​ಗಳ ಕಾಣಿಕೆ ನೀಡಿದ್ದರು. ವಿಕೆಟ್ ಉರುಳುತ್ತಿದ್ದರು ಮತ್ತೊಂದು ಬದಿಯಲ್ಲಿ ಕ್ರೀಸ್ ಕಚ್ಚಿ ನಿಂತಿದ್ದ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ತಂಡಕ್ಕೆ ಕೊಹ್ಲಿ 197 ರನ್ ಗಳ ಗುರಿಯನ್ನು ನೀಡಿತ್ತು.

    MORE
    GALLERIES

  • 38

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಆದರೆ ಗುಜರಾತ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅಜೇಯ 104 ರನ್​​ ಶತಕದ ನೆರವಿನಿಂದ ತಂಡಕ್ಕೆ ಗೆಲುವು ತಂದು ಕೊಟ್ಟರು. ಗಿಲ್ ಜೊತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿಜಯ್ ಶಂಕರ್ 54 ರನ್ ಗಳ ಕಾಣಿಕೆಯನ್ನು ನೀಡಿದ್ದರು. ಇವರ ಜೊತೆಯಾಟ ಗುಜರಾತ್ ಗೆಲುವಿಗೆ ಕಾರಣವಾಯ್ತು ಎಂದು ಹೇಳಬಹುದು.

    MORE
    GALLERIES

  • 48

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಗುಜರಾತ್​ ಇನ್ನಿಂಗ್ಸ್​ನ ಕೊನೆಯ ಓವರ್​​ ಎಸೆದ ವೇಯ್ನ್ ಪಾರ್ನೆಲ್ ಮೊದಲ ಎಸೆತವನ್ನೇ ನೋಬಾಲ್ ಎಸೆದು ನಿರಾಸೆ ಮೂಡಿಸಿದ್ದರು. ಈ ವೇಳೆ ಎದುರಾಳಿ ತಂಡಕ್ಕೆ ಫ್ರೀ ಹಿಟ್ ಅವಕಾಶ ಕೂಡ ಸಿಕ್ತು. ಆದರೆ ಎರಡನೇ ಎಸೆತ ಕೂಡ ವೈಡ್ ಮಾಡಿದ ವೇಯ್ನ್ ಪಾರ್ನೆಲ್ ಎದುರಾಳಿ ತಂಡಕ್ಕೆ ಗೆಲುವು ಖಚಿತ ಎಂದು ದೃಢಪಡಿಸಿದ್ದರು. ಮುಂದಿನ ಎಸೆತವನ್ನು ಗಿಲ್ ಸಿಕ್ಸರ್ ಬಾರಿಸಿ ಗುಜರಾತ್​ ತಂಡವನ್ನು ಐದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ತಲುಪಿಸಿದ್ದರು.

    MORE
    GALLERIES

  • 58

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಇತ್ತ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಿರಾಸ ಬೌಲಿಂಗ್ ಪ್ರದರ್ಶನ ತೋರಿದ ಆರ್​ಸಿಬಿಗೆ ಪ್ಲೇ ಆಫ್​ ಆಸೆ ಕೈ ತಪ್ಪಿತ್ತು. ಇತ್ತ ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್​​ ವಿರುದ್ಧ ಗೆಲುವು ಪಡೆದಿದ್ದ ಕಾರಣ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ.

    MORE
    GALLERIES

  • 68

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಇನ್ನು, ಆರ್​ಸಿಬಿ ತಂಡ ಸೋಲುತ್ತಿದ್ದಂತೆ ಇನ್​​ಸ್ಟಾದಲ್ಲಿ ಲಕ್ನೋ ವೇಗಿ ನವೀನ್ ಉಲ್​ ಹಕ್​ ಮತ್ತೊಮ್ಮೆ ಕೆಣಕಿದ್ದು, ಇನ್​ಸ್ಟಾದಲ್ಲಿ ಪೋಸ್ಟ್​​ವೊಂದನ್ನು ಹಾಕಿ ನೇರ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ. ಆರ್​ಸಿಬಿ ಸೋಲುಂಡ ಸಮಯದಲ್ಲಿ ಓರ್ವ ಆ್ಯಂಕರ್​ ಬಿದ್ದು ಬಿದ್ದು ನಗುತ್ತಿರುವ ಫೋಟೋ ಶೇರ್ ಮಾಡಿ ಪರೋಕ್ಷವಾಗಿ ಆರ್​​ಸಿಬಿ ಸೋಲನ್ನು ಸಂಭ್ರಮಿಸಿದ್ದಾರೆ.

    MORE
    GALLERIES

  • 78

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಈ ರೀತಿ ಆರ್​ಸಿಬಿ ವಿರುದ್ಧ ನವೀನ್ ಪೋಸ್ಟ್​ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಕೊಹ್ಲಿ ಔಟ್​ ಆದ ಪ್ರತಿ ಬಾರಿಯೂ ನವೀನ್ ಇಂತಹದ್ದೆ ಪೋಸ್ಟ್​​ಗಳನ್ನು ಹಾಕುತ್ತಾ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಆತ ಮಿತಿ ಮೀರಿ ವರ್ತನೆ ಮಾಡುತ್ತಿದ್ದಾನೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

    MORE
    GALLERIES

  • 88

    IPL 2023: ಆರ್​​ಸಿಬಿ ಸೋಲಿಗೆ ನವೀನ್ ಲೇವಡಿ; ಕೊಹ್ಲಿ ಕಾಲೆಳೆದ ಲಕ್ನೋ ಬೌಲರ್​ಗೆ ಅಭಿಮಾನಿಗಳ ಟಾಂಗ್​!

    ಯಾವುದೇ ಕ್ರೀಡೆಯಲ್ಲಿ ಆದರೂ ಸೋಲು ಗೆಲುವು ಸಾಮಾನ್ಯ. ಕಳೆದ ವರ್ಷದ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ತಂಡ ಲಕ್ನೋ ತಂಡವನ್ನು ಸೋಲಿಸಿದ್ದನ್ನು ನವೀನ್​ಗೆ ನೆನಪು ಮಾಡಿಕೊಟ್ಟಿದ್ದಾರೆ. ಅಲ್ಲದೆ, ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲೂ ಲಕ್ನೋ ಗೆಲುವು ಪಡೆಯುತ್ತೆ ಅಂತ ಗ್ಯಾರಂಟಿ ಏನು ಎಂದು ಪ್ರಶ್ನೆ ಮಾಡಿ ನೆಟ್ಟಿಗರು ನವೀನ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇಂತಹ ಕೆಟ್ಟ ಕೀಟಲೆಗಳಿಂದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ದ್ವೇಷ ಮಾಡುವ ಆಟಗಾರನಾಗುತ್ತಿಯಾ ಅಂತಲೂ ಹಲವರು ವಾರ್ನಿಂಗ್ ನೀಡಿದ್ದಾರೆ.

    MORE
    GALLERIES