MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

IPL 2023: ಶ್ರೀಲಂಕಾದ ಮಾಜಿ ಸ್ಟಾರ್​ ಬೌಲರ್​ ಲಸಿತ್ ಮಾಲಿಂಗ, ಎಂಎಸ್ ಧೋನಿ ಅವರ ಹೇಳಿಕೆಯನ್ನು ನಿರಾಕರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

First published:

  • 17

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಐಪಿಎಲ್ 2022ರಲ್ಲಿ ಎಡವಿದ್ದ ಚೆನ್ನೈ ಸೂಪರ್ ಕಿಂಗ್ಸ್ 2023ರಲ್ಲಿ ಭರ್ಜರಿ ಕಂಬ್ಯಾಕ್​ ಮಾಡಿದೆ. ಇದೀಗ ಪ್ಲೇ ಆಫ್‌ನಲ್ಲಿ ಅಬ್ಬರಿಸಿದ ಚೆನ್ನೈ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ತಲುಪಿದೆ. ಮತ್ತು ಮತೀಶ ಪತಿರಾಣ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

    MORE
    GALLERIES

  • 27

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಏಕೆಂದರೆ ಅವರು ಚೆನ್ನೈನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ಈ ಋತುವಿನಲ್ಲಿ ಆಡಿರುವ 11 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೂ.ಮಾಲಿಂಗ ಎಂದೇ ಖ್ಯಾತಿ ಪಡೆದಿರುವ ಮತೀಶಾ ಡೆತ್ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ತೋರಿದರು. ಈ ಅವಕಾಶ ನೀಡಿದ ಚೆನ್ನೈ ನಾಯಕ ಎಂಎಸ್ ಧೋನಿ ನಂಬಿಕೆ ಉಳಿಸಿಕೊಂಡರು.

    MORE
    GALLERIES

  • 37

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಈ ಹಿನ್ನೆಲೆಯಲ್ಲಿ ಧೋನಿ ಮತಿಶಾ ಅವರನ್ನು ಹೊಗಳಿದ್ದಾರೆ. ಮತೀಶ ಪತಿರಾನ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಸೀಮಿತವಾಗಿರಬೇಕು. ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿಯುವುದು ಉತ್ತಮ' ಎಂದು ಧೋನಿ ಹೇಳಿದ್ದಾರೆ. ಒಂದು ವೇಳೆ ಗಾಯ ಮಾಡಿಕೊಂಡರೆ ವೃತ್ತಿ ಜೀವನ ಅಪಾಯಕ್ಕೆ ಸಿಲುಕುತ್ತದೆ ಎಂಬ ಉದ್ದೇಶದಿಂದ ಮಹಿ ಈ ರೀತಿ ಹೇಳಿದ್ದಾರೆ.

    MORE
    GALLERIES

  • 47

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಇದಕ್ಕೆ ಪ್ರತಿಕ್ರಿಯಿಸಿರುವ ಮಾಲಿಂಗ ಧೋನಿ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಗಾಯದ ಭಯದಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿಯುವ ಅಗತ್ಯವಿಲ್ಲ. ಟೆಸ್ಟ್ ಕ್ರಿಕೆಟ್ ಆಡುವುದರಿಂದ ಮಾತ್ರ ಟೆಕ್ನಿಕ್ ಸುಧಾರಿಸುತ್ತದೆ ಎಂದಿದ್ದಾರೆ.

    MORE
    GALLERIES

  • 57

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಎಂಎಸ್ ಧೋನಿ ಆ ಕಾಮೆಂಟ್‌ಗಳನ್ನು ಗಂಭೀರವಾಗಿ ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಲಾಗುತ್ತಿರಲಿಲ್ಲ' ಎಂದು ಲಸಿತ್ ಮಾಲಿಂಗ ಹೇಳಿದ್ದಾರೆ. ಲಸಿತ್ ಮಾಲಿಂಗ ಅವರ ಕಾಮೆಂಟ್‌ಗಳು ಸರಿಯಾಗಿವೆ ಎಂದು ಕೆಲವರು ವಾದಿಸುತ್ತಾರೆ. ಇದು ಧೋನಿಯಂತಹ ದಿಗ್ಗಜ ಕ್ರಿಕೆಟಿಗನೊಬ್ಬ ಹುಡುಗನಿಗೆ ನೀಡಿದ ಸಲಹೆ ಆಗಬಾರದು ಎಂದಿದ್ದಾರೆ.

    MORE
    GALLERIES

  • 67

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಶ್ರೀಲಂಕಾದ ಮತ್ತೋರ್ವ ಮಾಜಿ ವೇಗಿ ಚಮಿಂಡಾ ವಾಸ್, ಮಹಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಮತೀಶ ಪತಿರಾಣ ಅವರಂತಹ ಬೌಲರ್‌ಗಳನ್ನು ರಕ್ಷಿಸುವ ಅಗತ್ಯವಿದೆ. ಎಂಎಸ್ ಧೋನಿ ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 77

    MS Dhoni: ಧೋನಿ ಸಲಹೆ ನಿರಾಕರಿಸಿದ ಶ್ರೀಲಂಕಾ ಮಾಜಿ ಆಟಗಾರ, ಶಾಕಿಂಗ್​ ಹೇಳಿಕೆ!

    ಅವರು ಎಲ್ಲಾ ಫಾರ್ಮೆಟ್‌ಗಳಲ್ಲಿ ಆಡಿದರೆ ಫಿಟ್‌ನೆಸ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 4 ಓವರ್ ಬೌಲಿಂಗ್ ಮಾಡುವುದು ದೊಡ್ಡ ಹೊರೆಯಾಗುವುದಿಲ್ಲ. ಟೆಸ್ಟ್ ಮಾದರಿಯಲ್ಲಿ ದಿನಗಟ್ಟಲೆ ಬೌಲಿಂಗ್ ಮಾಡಬೇಕು. ಆಗ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ ಎಂದು ಚಮಿಂಡಾ ವಾಸ್​ ಹೇಳಿದ್ದಾರೆ

    MORE
    GALLERIES