MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

MS Dhoni 20th Over Record: ಮಹೇಂದ್ರ ಸಿಂಗ್ ಧೋನಿ ವಿಶ್ವದ ಉತ್ತಮ ನಾಯಕರಲ್ಲಿ ಒಬ್ಬರು. 3 ವರ್ಷಗಳ ಹಿಂದೆ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರಬಹುದು, ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಉಪಸ್ಥಿತಿಯು ಇನ್ನೂ ಹಾಗೇ ಇದೆ.

First published:

  • 18

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸದ್ಯ 41 ವರ್ಷ ವಯಸ್ಸು. ಐಪಿಎಲ್ 2023ರ ಆರಂಭಕ್ಕೂ ಮುನ್ನ ಈ ಋತುವಿನ ನಂತರ ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು.

    MORE
    GALLERIES

  • 28

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಆದರೆ ಮೈದಾನದಲ್ಲಿ ಎಂಎಸ್ ಧೋನಿ ಬೌಂಡರಿ, ಸಿಕ್ಸರ್ ಬಾರಿಸುವ ರೀತಿ ನೋಡಿದರೆ ಇನ್ನು 2-3 ವರ್ಷ ಆಡಬಹುದು ಎನಿಸುತ್ತಿದೆ. ಅದರಲ್ಲಿಯೂ ಧೋನಿ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿ ಮಿಂಚಿದ್ದರು.

    MORE
    GALLERIES

  • 38

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಎಸ್ ಧೋನಿ. ಐಪಿಎಲ್ ಒಟ್ಟಾರೆ ವೃತ್ತಿಜೀವನದಲ್ಲಿ ಧೋನಿ 20ನೇ ಓವರ್‌ನಲ್ಲಿ 282 ಎಸೆತಗಳನ್ನು ಎದುರಿಸಿದರು. ಅವರು 57 ಸಿಕ್ಸರ್ ಮತ್ತು 49 ಬೌಂಡರಿಗಳನ್ನು ಬಾರಿಸಿದ್ದಾರೆ.

    MORE
    GALLERIES

  • 48

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಅಂದರೆ ಧೋನಿ 106 ಎಸೆತಗಳಲ್ಲಿ 538 ರನ್ ಗಳಿಸಿದ್ದಾರೆ. ಆದರೆ ರಾಜಸ್ಥಾನ್​ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮತ್ತು ಸ್ಟ್ರೈಕ್ ಬದಲಾವಣೆ ಆಗದಿರುವುದರಿಂದ ನಾವು ಸೋತಿದ್ದೇವೆ ಎಂದು ಸೋಲಿನ ನಂತರ ಮಹಿ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 58

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಇದು ಸಿಎಸ್‌ಕೆಯಿಂದ ಐಪಿಎಲ್‌ನಲ್ಲಿ ನಾಯಕನಾಗಿ ಎಂಎಸ್ ಧೋನಿ ಅವರ 200 ನೇ ಪಂದ್ಯವಾಗಿತ್ತು. ಅವರು 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಐಪಿಎಲ್ 2019 ರಿಂದ ಧೋನಿ 20 ನೇ ಓವರ್‌ನಲ್ಲಿ 275 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಧೋನಿ ಅವರ ಬ್ಯಾಟಿಂಗ್ ಬಗ್ಗೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಐಪಿಎಲ್ 2023 ರಲ್ಲಿ ಧೋನಿ 2 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದ್ದಾರೆ. ಅಲ್ಲದೇ ಅವರು ತಮ್ಮ 41ನೇ ವಯಸ್ಸಿನಲ್ಲಿಯೂ ಅದ್ಭುತ ರೀತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

    MORE
    GALLERIES

  • 78

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಎಂಎಸ್ ಧೋನಿ ಅವರ ಒಟ್ಟಾರೆ ಟಿ20 ದಾಖಲೆ ಅದ್ಭುತವಾಗಿದೆ. ಅವರು 366 ಪಂದ್ಯಗಳಲ್ಲಿ 7000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು 28 ಅರ್ಧಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 135 ಆಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಉತ್ತಮವಾಗಿದೆ.

    MORE
    GALLERIES

  • 88

    MS Dhoni: 106 ಎಸೆತ, 538 ರನ್! ಧೋನಿಯ ಈ ದಾಖಲೆ ಮುರಿಯೋದು ಯಾರಿಂದಲೂ ಸಾಧ್ಯನೇ ಇಲ್ವಂತೆ!

    ಅಲ್ಲದೆ 320ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಜೊತೆಗೆ ಈವರೆಗೆ ಅವರು ಒಟ್ಟು 4 ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇದು 4 ಪಂದ್ಯಗಳಲ್ಲಿ ಎರಡನೇ ಸೋಲು. ತಂಡ 4 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

    MORE
    GALLERIES