Google Favourite Cricketers: ವಿರಾಟ್-ಧೋನಿ ಅಲ್ಲ, ಈ ವರ್ಷ ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಆದ ಆಟಗಾರ ಇವ್ರೇ!
Virat-Dhoni: ಗೂಗಲ್ ಇತ್ತೀಚೆಗೆ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಶ್ಚರ್ಯಕರ ವಿಷಯವೆಂದರೆ ಇದರಲ್ಲಿ ಕ್ರಿಕೆಟ್ ದಿಗ್ಗಜರ ಹೆಸರುಗಳೇ ಇಲ್ಲವಾಗಿದೆ.
ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ತಮ್ಮ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ.
2/ 7
ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಥವಾ ಎಂಎಸ್ ಧೋನಿ ಹೆಸರಿಲ್ಲ.
3/ 7
2022 ರಲ್ಲಿ ಭಾರತದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಆಟಗಾರರೆಂದರೆ ಬೇರೆ ಯಾರೂ ಅಲ್ಲ, ಅನುಭವಿ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ. ತಾಂಬೆ ಈ ವರ್ಷ ಐಪಿಎಲ್ ಅಥವಾ ಭಾರತ ತಂಡದ ಭಾಗವಾಗಿರಲಿಲ್ಲ. ಆದರೂ ಅವರನ್ನು ಅತೀ ಹೆಚ್ಚು ಗೂಗಲ್ನಲ್ಲಿ ಹುಡಕಲಾಗಿದೆ.
4/ 7
ಆದರೆ ಯಾವುದೇ ಪಂದ್ಯಗಳನ್ನು ಆಡದೆಯೇ ಅವರು ಹೇಗೆ ಅವರ ಹೆಸರನ್ನು ಹೆಚ್ಚು ಹುಡಕಲಾಯಿತು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. ಇದಕ್ಕೆ ಕಾರಣ ಅವರ ಬಯೋಪಿಕ್ ಆಗಿದೆ. ಹೌದು, ಈ ವರ್ಷ ಬಿಡುಗಡೆ ಆದ "ಕೌನ್ ಪ್ರವೀಣ್ ತಾಂಬೆ" ಎಂಬ ಬಯೋಪಿಕ್ ಎಂದು ಹೇಳಲಾಗಿದೆ.
5/ 7
ಈ ಚಿತ್ರದಲ್ಲಿ ಪ್ರವೀಣ್ ತಾಂಬೆ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಚಲನಚಿತ್ರವು 1 ಏಪ್ರಿಲ್ 2022 ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಯಿತು. ಟ್ವಿಟರ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯಲ್ಲಿ ತಾಂಬೆ ಕೂಡ ಇದ್ದಾರೆ.
6/ 7
ಅವರು ಭಾರತದಲ್ಲಿ ಒಟ್ಟಾರೆಯಾಗಿ 9 ನೇ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಪ್ರವೀಣ್ ತಾಂಬೆ ಅವರ ಕ್ರಿಕೆಟ್ ಪಯಣ ತುಂಬಾ ಸ್ಪೂರ್ತಿದಾಯಕವಾಗಿದೆ. 2013ರಲ್ಲಿ 41ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಟವಾಡಿದ್ದರು. ಅವರು ತಮ್ಮ ಜೀವನದಲ್ಲಿ ಯಾವುದೇ ಮಟ್ಟದಲ್ಲಿ ಒಂದೇ ಒಂದು ಪ್ರಥಮ ದರ್ಜೆ ಕ್ರಿಕೆಟ್ ಆಟವನ್ನು ಆಡಲಿಲ್ಲ.
7/ 7
ಅವರು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟ್ರಿಕ್ ಪಡೆದು ಮಿಂಚಿದ್ದರು. ನಂತರ 2020ರಲ್ಲಿ T10 ಲೀಗ್ನಲ್ಲಿ ಭಾಗವಹಿಸಿದ ನಂತರ ಯಾವುದೇ ರೀತಿಯ ಭಾರತೀಯ ಕ್ರಿಕೆಟ್ನಲ್ಲಿ ಆಟವಾಡುತ್ತಿಲ್ಲ. ಪ್ರವೀಣ್ ತಾಂಬೆ ಈಗ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಸ್ಪಿನ್ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.