ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತು ಅವರ ಪತ್ನಿ ಪೂಜಾ ಯಾದವ್ ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಮೊಹಮ್ಮದ್ ಕೈಫ್ ನೋಯ್ಡಾ ಮೂಲದ ಪತ್ರಕರ್ತೆ ಪೂಜಾ ಯಾದವ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಧರ್ಮ ಎಂಬ ಒಂದು ಬೇಲಿಯಿತ್ತು. ಆದರೂ ಇದನ್ನೂ ಮೀರಿ ಇಬ್ಬರೂ ಅಂತಿಮವಾಗಿ ವಿವಾಹವಾದರು.
2/ 10
BollywoodShaadi.com ಪ್ರಕಾರ, ಮೊಹಮ್ಮದ್ ಕೈಫ್ ಮತ್ತು ಪೂಜಾ ಯಾದವ್ 2007ರಲ್ಲಿ ಪಾರ್ಟಿ ಒಂದರಲ್ಲಿ ಭೇಟಿಯಾದರು. ಆಗ ಪೂಜಾ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪೂಜಾ ಮತ್ತು ಕೈಫ್ ತಮ್ಮ ಮೊದಲ ಭೇಟಿ ನಂತರ ಅವರು ಡೇಟಿಂಗ್ ಮಾಡಲು ಆರಂಭಿಸಿದ್ದರು.
3/ 10
ಮೊಹಮ್ಮದ್ ಕೈಫ್ ಮತ್ತು ಪೂಜಾ ಯಾದವ್ 4 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆ ನಂತರ ಈ ಇಬ್ಬರು ತಮ್ಮ ಸಂಬಂಧವನ್ನು ಮತ್ತಷ್ಟು ಮುಂದುವರಿಸಲು ನಿರ್ಧರಿಸಿದರು. ಅಂದಹಾಗೆ ಕೈಫ್ ಮತ್ತು ಪೂಜಾ 26ನೇ ಮಾರ್ಚ್ 2011ರಂದು ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು.
4/ 10
ಮೊಹಮ್ಮದ್ ಕೈಫ್ ನೋಯ್ಡಾದಲ್ಲಿಯೇ ವಿವಾಹವಾದರು. ಕೈಫ್ ಮುಸ್ಲಿಂ ಮತ್ತು ಪೂಜಾ ಹಿಂದೂ ಆಗಿದ್ದಾರೆ. ಆದರೆ, ಧರ್ಮ ಇವರಿಬ್ಬರ ಪ್ರೀತಿಗೆ ಜೊತೆಗೆ ಮದುವೆಗೆ ಯಾವುದೇ ರೀತಿಯಿಲ್ಲಿ ಅಡ್ಡಿಯಾಗಲಿಲ್ಲ. ಮೇಲಾಗಿ ಕುಟುಂಬದ ಹಿರಿಯರೂ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.
5/ 10
ಮೊಹಮ್ಮದ್ ಕೈಫ್ ಮತ್ತು ಪೂಜಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕೈಫ್ ಅವರ ಹಿರಿಯ ಮಗ 28 ಫೆಬ್ರವರಿ 2012ರಂದು ಜನಿಸಿದರು. ಕೈಫ್ ಮಗನಿಗೆ ಕಬೀರ್ ಎಂದು ಹೆಸರಿಟ್ಟಿದ್ದಾರೆ. ಇದರ ನಂತರ, ಏಪ್ರಿಲ್ 2017ರಲ್ಲಿ ಕೈಫ್ ಮತ್ತು ಪೂಜಾ ಅವರಿಗೆ ಹೆಣ್ಣು ಮಗು ಜನಿಸಿತು. ಮಗಳಿಗೆ ಇವಾ ಎಂದು ಹೆಸರಿಟ್ಟಿದ್ದಾರೆ.
6/ 10
2014ರ ಲೋಕಸಭೆ ಚುನಾವಣೆಯಲ್ಲಿ ಕೈಫ್ ಸ್ಪರ್ಧಿಸಲು ನಿರ್ಧರಿಸಿದಾಗ ಪೂಜಾ ಪತಿಯ ಪರ ಪ್ರಚಾರ ಮಾಡಲು ಸಾರ್ವಜನಿಕವಾಗಿ ಮೊದಲ ಬಾರಿಗೆ ಬಂದಿದ್ದರು. ಪೂಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
7/ 10
ಪೂಜಾ ಕೈಫ್ ಆಗಾಗ್ಗೆ ತನ್ನ ಅಧಿಕೃತ Instagram ನಲ್ಲಿ ತನ್ನ ಸುಂದರವಾದ ಮತ್ತು ಆಕರ್ಷಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೌಂದರ್ಯ ಮತ್ತು ಗ್ಲಾಮರ್ ವಿಷಯದಲ್ಲಿ ಬಾಲಿವುಡ್ ನಾಯಕಿಯಂತೆ ಕಂಡುಬರುತ್ತಾರೆ.
8/ 10
ಪೂಜಾ ಅವರು ಸಂದರ್ಶನವೊಂದರಲ್ಲಿ, ‘ನಾನು ನನ್ನ ಕೆಲಸವನ್ನು ನಿಜವಾಗಿಯೂ ಆನಂದಿಸುತ್ತೇನೆ. ನನ್ನ ಕುಟುಂಬ ನನಗೆ ಯಾವಾಗಲೂ ತುಂಬಾ ಬೆಂಬಲವನ್ನು ನೀಡುತ್ತದೆ. ಕೈಫ್ ತುಂಬಾ ಅರ್ಥಮಾಡಿಕೊಳ್ಳುತ್ತಾರೆ. ಕೈಫ್ ನನ್ನನ್ನು ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸು ಎಂದು ಹೇಳಲಿಲ್ಲ‘ ಎಂದು ಹೇಳಿದ್ದಾರೆ.
9/ 10
ಮಗನ ಜನನದ ನಂತರ ಪೂಜಾ ಎರಡು ವರ್ಷಗಳ ಕಾಲ ವಿರಾಮ ತೆಗೆದುಕೊಂಡರು. ಆದರೆ ನಂತರ ಅವಳು ತನ್ನ ಕೆಲಸವನ್ನು ಮುಂದುವರೆಸಿದ್ದಾರೆ. ಅದೇ ರೀತಿ ಮಗಳ ಜನನದ ಸಮಯದಲ್ಲಿ ಪೂಜಾ ವಿರಾಮಕ್ಕೆ ಹೋಗಿದ್ದರು. ಈಗ ಮಕ್ಕಳಿಬ್ಬರೂ ದೊಡ್ಡವರಾಗಿದ್ದು, ಪೂಜಾ ಮತ್ತೆ ಕೆಲಸಕ್ಕೆ ಸೇರಿದ್ದಾರೆ.
10/ 10
ಪೂಜಾ ಕೈಫ್ ಕಾರ್ಯಕ್ರಮದ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಹಮ್ಮದ್ ಕೈಫ್ ಮತ್ತು ಪೂಜಾ ಇಬ್ಬರೂ ಸಹ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಅದಕ್ಕಾಗಿಯೇ ಈ ದಂಪತಿಗಳು ಅನೇಕರಿಗೆ ಆದರ್ಶಪ್ರಾಯರಾಗಿದ್ದಾರೆ.