Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

Pakistan Cricket: ಪಾಕಿಸ್ತಾನ ಕ್ರಿಕೆಟ್​ ತಂಡ ವಿಶ್ವಕಪ್ ಬಳಿಕ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ನಂತರದ ಏಕದಿನ ಸರಣಿಯನ್ನೂ ಕಳೆದುಕೊಂಡಿತು.

First published:

  • 18

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಪಾಕಿಸ್ತಾನ ಕ್ರಿಕೆಟ್ ತಂಡದ ಸದ್ಯದ ಪರಿಸ್ಥಿತಿ ಚೆನ್ನಾಗಿಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಬಳಿಕ, ಪಾಕಿಸ್ತಾನ ಸಾಲು ಸಾಳು ಸರಣಿಗಳಲ್ಲಿ ಸೋಲನ್ನು ಅನುಭವಿಸುತ್ತಿದೆ.

    MORE
    GALLERIES

  • 28

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ವಿಶ್ವಕಪ್ ಬಳಿಕ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಡ್ರಾದಲ್ಲಿ ಅಂತ್ಯಗೊಂಡರೆ, ನಂತರದ ಏಕದಿನ ಸರಣಿಯನ್ನು ಕಳೆದುಕೊಂಡಿತು.

    MORE
    GALLERIES

  • 38

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಹೀಗಾಗಿ ಅನೇಕ ಪಾಕ್​ ಮಾಜಿ ಆಟಗಾರರು ತಂಡದ ಪ್ರದರ್ನಶದ ಬಗ್ಗೆ ಬೇಸರ ವ್ಯಕ್ತಪಸಿದುತ್ತಿದ್ದಾರೆ. ಮುಖ್ಯ ಕೋಚ್ ಆಗಿರುವ ಸಕ್ಲೇನ್ ಮುಷ್ತಾಕ್ ಅವರ ಗುತ್ತಿಗೆ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಪಿಸಿಬಿ ಹೊಸ ಕೋಚ್ ಹುಡುಕಾಟದಲ್ಲಿದೆ.

    MORE
    GALLERIES

  • 48

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    2016 ರಿಂದ 2019ರ ವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಮಿಕ್ಕಿ ಆರ್ಥರ್ ಅವರನ್ನು ಮತ್ತೊಮ್ಮೆ ಮುಖ್ಯ ಕೋಚ್ ಆಗಿ ನೇಮಿಸಲು ಪಿಸಿಬಿ ಆಸಕ್ತಿ ತೋರಿಸುತ್ತಿದೆ. ಆದರೆ ಮಿಕ್ಕಿ ಆರ್ಥರ್ ಪಿಸಿಬಿ ಗೆ ಬಿಗ್ ಶಾಕ್ ನೀಡಿದ್ದಾರೆ.

    MORE
    GALLERIES

  • 58

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಮಿಕ್ಕಿ ಆರ್ಥರ್ ಕೋಚ್ ಆಗಲು ಒಪ್ಪಿಕೊಂಡಿದ್ದು, ಆದರೆ ಅವರು ಪಿಸಿಬಿಗೆ ಕೆಲ ಷರತ್ತು ವಿಧಿಸಿದ್ದಾರೆ. ಪಾಕಿಸ್ತಾನಕ್ಕೆ ಬಂದು ತಂಡಕ್ಕೆ ತರಬೇತಿ ನೀಡುವುದಿಲ್ಲ, ಇಂಗ್ಲೆಂಡ್‌ನಲ್ಲಿಯೇ ಇದ್ದು ಆನ್‌ಲೈನ್ ಕೋಚಿಂಗ್ ಮಾಡುತ್ತೇನೆ ಎಂದು ಪಿಸಿಬಿಗೆ ತಿಳಿಸಿರುವುದಾಗಿ ವರದಿಯಾಗಿದೆ.

    MORE
    GALLERIES

  • 68

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಇದರಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನಕ್ಕೆ ನೇರವಾಗಿ ತರಬೇತಿ ನೀಡುವುದಾಗಿ ಹೇಳಿದ್ದಾರೆ. ಭಾರತವನ್ನು ಪ್ರವೇಶಿಸಲು ಸಿದ್ಧವಾಗಿರುವ ಮಿಕ್ಕಿ ಆರ್ಥರ್, ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 78

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಕೋಚಿಂಗ್ ನಲ್ಲಿ ವಿನೂತನ ಪ್ರಯೋಗ ಆರಂಭಿಸಿದ್ದೇವೆ ಎಂದು ಪಿಸಿಬಿ ಹೇಳಿದೆ. ಆನ್‌ಲೈನ್ ಕೋಚ್ ನೇಮಕ ಮಾಡಿದ್ದಕ್ಕಾಗಿ ಸ್ವಂತ ಅಭಿಮಾನಿಗಳು ಪಾಕಿಸ್ತಾನದ ವಿರುದ್ಧ ಕೋಪಗೊಂಡಿದ್ದಾರೆ.

    MORE
    GALLERIES

  • 88

    Pakistan Cricket: ಕ್ರಿಕೆಟ್​ ಲೋಕದಲ್ಲಿ ಹೊಸ ಟ್ರೆಂಡ್​ ಆರಂಭಿಸಿದ ಪಾಕಿಸ್ತಾನ! ಇದ್ಯಾವ ಸೀಮೆ ಹುಚ್ಚಾಟ ಎಂದ ಪಾಕ್​ ಫ್ಯಾನ್ಸ್

    ಏಪ್ರಿಲ್ 1 ರಿಂದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಿಕ್ಕಿ ಆರ್ಥರ್ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ. ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಐದು ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲಿದೆ. ಮಿಕ್ಕಿ ಆರ್ಥರ್ ಕೋಚ್​ ಆಗಿದ್ದ ವೇಳೆ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.

    MORE
    GALLERIES