IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

IPL 2023: ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ವಿರಾಟ್ ಕೊಹ್ಲಿಯೊಂದಿಗಿನ ಜಗಳವನ್ನು ಸ್ವಲ್ಪ ವೈಯಕ್ತಿಕವಾಗಿ ತೆಗೆದುಕೊಂಡಂತಿದೆ.

First published:

  • 17

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ ವಿರಾಟ್ ಕೊಹ್ಲಿಯೊಂದಿಗಿನ ಜಗಳವನ್ನು ಸ್ವಲ್ಪ ವೈಯಕ್ತಿಕವಾಗಿ ತೆಗೆದುಕೊಂಡಂತಿದೆ. ಈ ವಿವಾದವನ್ನು ಕೊನೆಗೊಳಿಸುವ ಬದಲು ಇನ್ನೂ ಮುಂದುವರೆಸಿದ್ದಾರೆ.

    MORE
    GALLERIES

  • 27

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನು ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಕೂಡ ತಮ್ಮ ಹೋಟೆಲ್ ಕೋಣೆಯಲ್ಲಿ ಕುಳಿತು ಆನಂದಿಸುತ್ತಿದ್ದಾರೆ. ವಿರಾಟ್ ವಿಕೆಟ್ ಬಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಶೈಲಿಯಲ್ಲಿ ಫೋಸ್ಟ್​ ಮಾಡಿದ್ದಾರೆ.

    MORE
    GALLERIES

  • 37

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ನವೀನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಿಯೂಷ್ ಚಾವ್ಲಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ನವೀನ್-ಉಲ್-ಹಕ್ ಸ್ಟೋರಿಯಲ್ಲಿ ಮಾವಿನಹಣ್ಣು ತಿನ್ನುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 47

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ಟಿವಿ ಪರದೆಯ ಮುಂದೆ MI vs RCB ಪಂದ್ಯ ನೋಡುತ್ತಿದ್ದು, ಇದರಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಅನ್ನು ಪಿಯೂಷ್ ಚಾವ್ಲಾ ಪಡೆದರು. ಈ ಚಿತ್ರವನ್ನು ಹಂಚಿಕೊಂಡಿರುವ ನವೀನ್ ಅವರು "ಸಿಹಿ ಮಾವಿನ ಹಣ್ಣುಗಳು" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

    MORE
    GALLERIES

  • 57

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ವಾಸ್ತವವಾಗಿ, ಅವರು ವಿರಾಟ್ ಅವರ ವಿಕೆಟ್ ಬಿದ್ದಾಗ ಅದನ್ನು ಆನಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.

    MORE
    GALLERIES

  • 67

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ಇದು ಮಾತ್ರವಲ್ಲದೇ ಗೌತಮ್​ ಗಂಭೀರ್​ ಸಹ ವಿರಾಟ್​ ಕೊಹ್ಲಿಯನ್ನು ಕೆಣಕುವಲ್ಲಿ ಹಿಂದೆಬಿದ್ದಿಲ್ಲ. ಅವರೂ ಸಹ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದು, ವಾಟ್​ ಎ ಪ್ಲೇಯರ್​ ಎಂದು ಮುಂಬೈ ವೇಗಿಯನ್ನು ಹೊಗಳಿದ್ದಾರೆ. ಈ ಮೂಲಕ ಕೊಹ್ಲಿಗೆ ಕೌಂಟರ್​ ನೀಡಿದ್ದಾರೆ.

    MORE
    GALLERIES

  • 77

    IPL 2023: ಕೊಹ್ಲಿಗೆ ಗಂಭೀರ್​-ನವೀನ್ ಕೌಂಟರ್​! ಲಕ್ನೋ ವಿರುದ್ಧ ಆರ್​ಸಿಬಿ ಫ್ಯಾನ್ಸ್ ಗರಂ

    ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವಿನ ವಿವಾದವು ಲಕ್ನೋ ಸೂಪರ್ ಜೈಂಟ್ಸ್ ಮತ್ತುಆರ್​ಸಿಬಿ ನಡುವಿನ ಪಂದ್ಯದ ವೇಳೆ ಪ್ರಾರಂಭವಾಯಿತು. ಈ ಜಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಮುಂದುವರೆದಿದೆ. 

    MORE
    GALLERIES