ಮಂದಿರಾ ಬೇಡಿ ಕ್ರಿಕೆಟ್ ಲೋಕದಲ್ಲಿ ಮತ್ತೆ ಸದ್ದು ಮಾಡಲಿದ್ದಾರೆ. ಮಂದಿರಾ ಬೇಡಿ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಪ್ರಾಂಚೈಸಿ ಸೇರುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮತ್ತು ಕಲರ್ಸ್ ಹೊಸ ರಿಯಾಲಿಟಿ ಶೋದೊಂದಿಗೆ ಬರುತ್ತಿದೆ. 'ಕ್ರಿಕೆಟ್ ಕಾ ಟಿಕೆಟ್'. ಮಂದಿರಾ ಬೇಡಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಪ್ರದರ್ಶನವು ದೇಶದಾದ್ಯಂತದ ಅಗ್ರ ಕ್ರಿಕೆಟ್ ಪ್ರತಿಭೆಗಳನ್ನು ಹುಡುಕಲು ರಚಿಸಲಾದ ಪ್ರದರ್ಶನವಾಗಿದೆ. ಬಹಳ ದಿನಗಳಿಂದ ಕ್ರಿಕೆಟ್ ಶೋಗಳಿಂದ ದೂರವಿದ್ದ ಮಂದಿರಾ ಕ್ರಿಕೆಟ್ ಲೋಕಕ್ಕೆ ಪುನರಾಗಮನ ಮಾಡುತ್ತಿದ್ದಾರೆ.
ಮಂದಿರಾ ಬೇಡಿ ಕ್ರಿಕೆಟ್ ಶೋಗೆ ಆ್ಯಂಕರ್ ಮಾಡಿದ್ದು, ಅದಕ್ಕೆ ಗ್ಲಾಮರ್ ಕೂಡ ನೀಡಿದ್ದು ತುಂಬಾ ಜನಪ್ರೀಯವಾಯಿತು. ಆದಾಗ್ಯೂ, 19 ವರ್ಷಗಳ ನಂತರ, ಮಂದಿರಾ ಬೇಡಿ ಅವರು ಕ್ರೀಡಾ ಆ್ಯಂಕರಿಂಗ್ಗೆ ಸಂಬಂಧಿಸಿದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಾನು ಆ್ಯಂಕರಿಂಗ್ ಮಾಡುವಾಗ ಕ್ರಿಕೆಟಿಗರು ನನ್ನತ್ತ ನೋಡುತ್ತಿದ್ದರು ಎಂದು ಸಂದರ್ಶನದಲ್ಲಿ ಒಮ್ಮೆ ಮಂದಿರಾ ಹೇಳಿದ್ದರು.