IPL 2023 Mini Auction: ಕೆಎಲ್ ರಾಹುಲ್ ನಾಯಕತ್ವ ಕೊನೆಗೊಳ್ಳುತ್ತಾ? ಲಕ್ನೋ ತಂಡದ ಮುಂದಿನ ಕ್ಯಾಪ್ಟನ್ ಯಾರು?
IPL 2023 Mini Auction: ಈ ವರ್ಷದ ಐಪಿಎಲ್ನಲ್ಲಿ ಲಕ್ನೋ ಮತ್ತು ಗುಜರಾತ್ ತಂಡಗಳು ಯಶಸ್ವಿಯಾಗಿವೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಚಾಂಪಿಯನ್ ಆದರೆ ರಾಹುಲ್ ನಾಯಕತ್ವದ ಲಕ್ನೋ ಪ್ಲೇ ಆಫ್ ತಲುಪಿತ್ತು.
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಹೊಸದಾಗಿ ಎಂಟ್ರಿಕೊಟ್ಟಿರುವುದು ಎಲ್ಲರಿಗೂ ತಿಳಿದಿದೆ.
2/ 8
ಮೊದಲ ಸೀಸನ್ ಆಗಿದ್ದರೂ ಈ ಬಾರಿಯ ಐಪಿಎಲ್ ನಲ್ಲಿ ಈ ಎರಡು ತಂಡಗಳು ಯಶಸ್ಸು ಕಂಡಿವೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಚಾಂಪಿಯನ್ ಆದರೆ, ರಾಹುಲ್ ನಾಯಕತ್ವದ ಲಕ್ನೋ ಪ್ಲೇ ಆಫ್ ತಲುಪಿತ್ತು.
3/ 8
ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವದ ರೇಸ್ ನಲ್ಲಿದ್ದಾರೆ. ಜನವರಿಯಲ್ಲಿ ಟಿ20 ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
4/ 8
ಖಂಡಿತ ಈ ಅವಕಾಶ ರಾಹುಲ್ ಗೆ ಬರಬೇಕಿತ್ತು. ಯಾಕೆಂದರೆ ಹಾರ್ದಿಕ್ ಗೂ ಮುನ್ನವೇ ರಾಹುಲ್ ಟೀಂ ಇಂಡಿಯಾದ ಉಪನಾಯಕನಾಗಿ ಆಯ್ಕೆಯಾಗಿದ್ದರು. ಆದರೆ ರಾಹುಲ್ ತಮ್ಮ ಪ್ರದರ್ಶನದಿಂದ ಆ ಅವಕಾಶವನ್ನು ಕಳೆದುಕೊಂಡರು.
5/ 8
ರಾಹುಲ್ ಅವರ ಲಕ್ನೋ ನಾಯಕತ್ವವೂ ಅಪಾಯದಲ್ಲಿದೆ. ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಲು ಲಕ್ನೋ ಸೂಪರ್ಜೈಂಟ್ಸ್ ತೀರ್ಮಾನಿಸಿದೆ ಎಂದು ತಿಳಿದಿದೆ.
6/ 8
ಪ್ರಸ್ತುತ ಲಕ್ನೋ ಬಳಿ ರೂ. 22 ಕೋಟಿ ರೂಪಾಯಿ ಪರ್ಸ್ ನಲ್ಲಿ ಉಳಿದಿದೆ. ಲಕ್ನೋ ಹರಾಜಿನಲ್ಲಿ ಕನಿಷ್ಠ ನಾಲ್ವರು ಆಟಗಾರರನ್ನು ಖರೀದಿಸಬೇಕಾಗಿದೆ. ಈ ಕ್ರಮದಲ್ಲಿ ಬೆನ್ ಸ್ಟೋಕ್ಸ್ ಗೆ ಲಕ್ನೋ ಭಾರಿ ಬೆಲೆ ತೆರಲು ಸಿದ್ಧವಾಗಿದೆ.
7/ 8
ಬೆನ್ ಸ್ಟೋಕ್ಸ್ ಏನಾದರೂ ಲಕ್ನೋ ತಂಡ ಸೇರಿಕೊಂಡಲ್ಲಿ ರಾಹುಲ್ ನಾಯಕತ್ವಕ್ಕೆ ಕಷ್ಟವಾಗಲಿದೆ. ಆದರೆ, ಋತುವಿನಲ್ಲಿ ಅವರ ವೈಯಕ್ತಿಕ ಫಾರ್ಮ್ ಮತ್ತು ನಾಯಕತ್ವ ಕಳಪೆಯಾಗಿದ್ದರೆ, ಬೆನ್ ಸ್ಟೋಕ್ಸ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆಗಳಿವೆ.
8/ 8
ಐಪಿಎಲ್ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಇದಕ್ಕಾಗಿ 991 ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಇದು ಬೆನ್ ಸ್ಟೋಕ್ಸ್ ಜೊತೆಗೆ ಸ್ಯಾಮ್ ಕರಣ್ ಮತ್ತು ಕ್ಯಾಮರೂನ್ ಗ್ರೀನ್ ಅವರಂತಹ ಪವರ್ ಹಿಟ್ಟರ್ಗಳನ್ನು ಹೊಂದಿದೆ.