ಭಾರತದ ಕ್ರೀಡಾ ಲೋಕದ ಇತ್ತೀಚಿನ ಖ್ಯಾತ ನಿರೂಪಕಿಯರಲ್ಲಿ ನಶ್ಪ್ರೀತ್ ಕೌರ್ ಕೂಡ ಒಬ್ಬರು. ಭಾರತ ಮೂಲದ ಈಕೆ ಬೆಳೆದಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ 2014ರಲ್ಲಿ ಮಾಡೆಲಿಂಗ್ ಜಗತ್ತಿನಲ್ಲಿ ಸಂಚರಿಸಿದ್ದ ಈಕೆ ಕಿರು ಸಿನಿಮಾ ಸ್ಟ್ರಿಂಗ್ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂಡಿಯನ್ ಪ್ರೀಮಿಯಲ್ ಲೀಗ್ 15ನೇ ಸೀಸನ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಭಾರತದ ಪ್ರಮುಖ ಕ್ರೀಡಾ ನಿರೂಪಕಿಯರಲ್ಲಿ ಒಬ್ಬರಾದ ಮಯಾಂತಿ ಲ್ಯಾಂಗರ್, ಟೀಮ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯ ಪತ್ನಿ. ಮಯಾಂತಿ ಕೆಲವು ಸೀಸನ್ಗಳಲ್ಲಿ ಐಪಿಎಲ್ ಸೇರಿದಂತೆ ಟೀಂ ಇಂಡಿಯಾದ ಪ್ರಮುಖ ಕ್ರಿಕೆಟ್ ಸರಣಿಗಳ ನಿರೂಪಣೆಯಿಂದ ಹೊರಗಿದ್ರು.ಮಗುವಿನ ಬಾಣಂತನದಲ್ಲಿ ತನ್ನ ವೃತ್ತಿಜೀವನಕ್ಕೆ ಬ್ರೇಕ್ ನೀಡಿದ್ದ ಮಯಾಂತಿ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.