IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

2022ರ ಐಪಿಎಲ್ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇನ್ನು, ಮಾರ್ಚ್ 26ರಿಂದ ಐಪಿಎಲ್ 15ನೇ ಸೀಸನ್ ಆರಂಭವಾಗಲಿದ್ದು, ಈವರೆಗೆ ನಡೆದಿರುವ 14 ಸೀಸನ್​ಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದ ಟಾಪ್​ ಆಟಗಾರರ ಪಟ್ಟಿಯನ್ನು ನೀಡಲಾಗಿದೆ.

First published:

  • 18

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಐಪಿಎಲ್ ಎಂದಾಕ್ಷಣ ಎಲ್ಲರಿಗೂ ಒಮ್ಮೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ನೆನಪಾಗದೇ ಇರಲಾರರು. ಅವರು 2013ರಲ್ಲಿ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಬರೋಬ್ಬರಿ 175 ರನ್​ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಒಂದು ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸಿರುವವರಾಗಿ ಉಳಿದಿದ್ದಾರೆ. ಅವರು 66 ಬಾಲ್​ ಗಳಲ್ಲಿ (4/13, 6/17) 175 ರನ್​ ಗಳಿಸಿದ್ದರು.

    MORE
    GALLERIES

  • 28

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಬ್ರೆಂಡಂ ಮೆಕಲಂ ಐಪಿಎಲ್ ಪ್ರಥಮ ವರ್ಷದ ಮೊದಲ ಪಂದ್ಯದಲ್ಲಿಯೇ ಆರ್ ಸಿಬಿ ವಿರುದ್ಧ 158 ರನ್​ಗಳಿಸಿದ್ದರು. ಕೋಲ್ಕತ್ತಾ ಪರ ಬ್ಯಾಟ್ ಮಾಡಿದ ಅವರು, 73 ಬಾಲ್​ ಗಳಲ್ಲಿ 10 ಬೌಂಡರಿ ಮತ್ತು 13 ಸಿಕ್ಸ್ ಸಿಡಿಉವ ಮೂಲಕ 158 ರನ್​ ಗಳಿಸಿದ್ದರು.

    MORE
    GALLERIES

  • 38

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಆರ್​ಸಿಬಿ ತಂಡದಲ್ಲಿ ಎಲ್ಲರ ಮೆಚ್ಚಿನ ಆಟಗಾರ ಎಬಿ ಡಿವಿಲಿಯರ್ಸ್ 2015ರ ಮುಂಬೈ ವಿರುದ್ಧದ ಪಂದದ್ಯದಲ್ಲಿ ಕೇವಲ 59 ಬಾಲ್​ ಗಳಲ್ಲಿ 19 ಬೌಂಡರಿ, 4 ಸಿಕ್ಸರ್​ ಗಳ ನೆರವಿನಿಂದ 133 ರನ್​ ಗಳಿಸಿದ್ದರು. ಮತ್ತೊಮ್ಮೆ ಗುಜರಾತ್ ಲಯನ್ಸ್ ವಿರುದ್ಧ 129 ರನ್​ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿ ಉಳಿದಿದ್ದಾರೆ.

    MORE
    GALLERIES

  • 48

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಕನ್ನಡಿಗ ಕೆಎಲ್ ರಾಹುಲ್ ಆರ್​ ಸಿಬಿ ವಿರುದ್ಧ 2020ರಲ್ಲಿ 69 ಬಾಲ್​ ಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್ ಗಳ ನೆರವಿನಿಂದ ಭರ್ಜರಿ 132 ರನ್​ ಗಳಸಿದ್ದರು. ಇದು ಸಹ ಐಪಿಎಲ್ ಇತಿಹಾಸದಲ್ಲಿ ಟಾಪ್ ಸ್ಕೋರ್​ ಆಗಿದೆ.

    MORE
    GALLERIES

  • 58

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    2018ರಲ್ಲಿ ಡೆಲ್ಲಿ ಪರ ಕಣಕ್ಕಿಳಿದಿದ್ದ ರಿಷಭ್ ಪಂತ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 63 ಬಾಲ್​ ಗಳಲ್ಲಿ 15 ಬೌಂಡರಿ ಮತ್ತು 7 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 128 ರನ್​ ಗಳಸಿದ್ದರು.

    MORE
    GALLERIES

  • 68

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಮುರಳಿ ವಿಜಯ್ ರಾಜಸ್ತಾನ್ ರಾಯಲ್ಸ್ ವಿರುದ್ಧ 2010ರಲ್ಲಿ 56 ಬಾಲ್​ ಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸ್ ಸಿಡಿಸಿ 127 ರನ್​ ಗಳಿಸಿದ್ದರು. ಈ ಪಂದ್ಯದಲ್ಲಿ ಅವರು 226.78 ಸ್ರೈಕ್ ರೇಟ್ ಹೊಂದಿದ್ದರು.

    MORE
    GALLERIES

  • 78

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    ಆಸೀಸ್ ಆಟಗಾರ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವಾಗ 2017ರಲ್ಲಿ ಕೋಲ್ಕತ್ತಾ ವಿರುದ್ಧ 59 ಬಾಲ್​ ಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಬರೊಬ್ಬರಿ 126 ರನ್​ ಗಳಿಸುವ ಮೂಲಕ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 88

    IPL ಪಂದ್ಯದಲ್ಲಿ ಬೌಲರ್​ಗಳ ಬೆವರಿಳಿಸದ ಪ್ಲೇಯರ್ಸ್​ಗಳು, IPL ನ ಟಾಪ್ ಸ್ಕೋರ್​ ಬ್ಯಾಟ್ಸ್​ಮನ್​ಗಳು

    2017ರಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ 64 ಬಾಲ್ ಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸ್ ಸಿಡಿಸುವ ಮೂಲಕ 124 ರನ್​ ಗಳಿಸಿದ್ದರು. ಅವರು ಆ ವರ್ಷ ರಾಜಸ್ತಾನ್ ರಾಯಲ್ಸ್ ಪರ ಆಡಿದ್ದರು.

    MORE
    GALLERIES