Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

ಭಾರತ ತಂಡದ ಆಟಗಾರ ಮತ್ತು ಹಾರ್ದಿಕ್ ಪಾಂಡ್ಯ ಬ್ರದರ್​ ಆದ ಕೃನಲ್ ಪಾಂಡ್ಯ ಗಂಡು ಮಗುವಿನ ತಂದೆಯಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published:

  • 17

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಭಾರತದ ಆಲ್ ರೌಂಡರ್ ಕೃನಾಲ್ ಪಾಂಡ್ಯ ತಂದೆಯಾಗಿದ್ದಾರೆ. ಅವರ ಪತ್ನಿ ಪಂಖೂರಿ ಶರ್ಮಾ ಗಂಡು ಮಗನಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಕೃನಲ್ ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣದವಾದ ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 27

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಕೃನಾಲ್ ಪಾಂಡ್ಯ ಅವರು ತಮ್ಮ ಮಗ ಮತ್ತು ಪತ್ನಿ ಪಂಖೂರಿ ಶರ್ಮಾ ಅವರೊಂದಿಗಿನ ಎರಡು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಮಗುವಿನ ಹೆಸರನ್ನೂ ಕೃನಲ್ ಬಹಿರಂಗಪಡಿಸಿದ್ದು, ಗಂಡು ಮಗುವಿಗೆ ‘ಕವೀರ್ ಕೃನಾಲ್ ಪಾಂಡ್ಯ‘ ಎಂದು ಹೆಸರಿಟ್ಟಿದ್ದಾರೆ.

    MORE
    GALLERIES

  • 37

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಕೃನಾಲ್ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅವರು ವಾರ್ವಿಕ್‌ಶೈರ್‌ಗಾಗಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಕೃನಾಲ್ ಮತ್ತು ಮಾಡೆಲ್ ಪಂಖೂರಿ ಶರ್ಮಾ ಡಿಸೆಂಬರ್ 2017 ರಲ್ಲಿ ವಿವಾಹವಾಗಿದ್ದರು.

    MORE
    GALLERIES

  • 47

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಕೃನಾಲ್ ಪಾಂಡ್ಯ ಮುಂಬರುವ ರಾಯಲ್ ಲಂಡನ್ ಕಪ್‌ಗಾಗಿ ವಾರ್ವಿಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ಗಾಗಿ ಆಡಲಿದ್ದಾರೆ. ಅವರು ಈ ಇಂಗ್ಲಿಷ್ ಕ್ಲಬ್‌ನೊಂದಿಗೆ ಟೈ ಅಪ್ ಮಾಡಿಕೊಂಡಿದ್ದಾರೆ. ಆಗಸ್ಟ್ 2 ರಿಂದ 23 ರವರೆಗೆ ನಡೆಯಲಿರುವ ರಾಯಲ್ ಲಂಡನ್ ಕಪ್‌ನಲ್ಲಿ ವಾರ್ವಿಕ್‌ಷೈರ್ ಕೃನಲ್ ಆಡಲಿದ್ದಾರೆ.

    MORE
    GALLERIES

  • 57

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಐಪಿಎಲ್-2022ರಲ್ಲಿ ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಅವರು 14 ಪಂದ್ಯಗಳಲ್ಲಿ 183 ರನ್‌ಗಳೊಂದಿಗೆ 10 ವಿಕೆಟ್‌ಗಳನ್ನು ಪಡೆದರು. ಈ 31 ವರ್ಷದ ಆಲ್‌ರೌಂಡರ್ ಭಾರತ ಪರ 19 ಟಿ20 ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

    MORE
    GALLERIES

  • 67

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಇನ್ನು, ಅವರು 5 ಏಕದಿನ ಪಂದ್ಯಗಳಲ್ಲಿ 1 ಅರ್ಧಶತಕದ ಸಹಾಯದಿಂದ 130 ರನ್ ಗಳಿಸಿದ್ದಾರೆ ಮತ್ತು ಟಿ20 ನಲ್ಲಿ 124 ರನ್ ಗಳಿಸಿದ್ದಾರೆ ಮತ್ತು 15 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕೃನಾಲ್ ಏಕದಿನ ಪಂದ್ಯದಲ್ಲೂ 2 ವಿಕೆಟ್ ಪಡೆದಿದ್ದಾರೆ. ಅವರು ಲಿಸ್ಟ್-ಎ ಕ್ರಿಕೆಟ್‌ನ 76 ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ ಮತ್ತು 2,231 ರನ್ ಗಳಿಸಿದ್ದಾರೆ.

    MORE
    GALLERIES

  • 77

    Krunal Pandya: ಪಾಂಡ್ಯ ಮನೆಗೆ ಹೊಸ ಸದಸ್ಯನ ಆಗಮನ, ತಂದೆಯಾದ ಸಂತಸ ಹಂಚಿಕೊಂಡ ಕೃನಾಲ್

    ಇನ್ನು, ಕೃನಲ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಅಣ್ಣ-ತಮ್ಮರಾಗಿದ್ದು, ಇದೀಗ ಹಾರ್ದಿಕ್ ಪಾಂಡ್ಯ ಚಿಕ್ಕಪ್ಪ ಆಗಿದ್ದಾರೆ. ಇನ್ನು, ಇವರಿಬ್ಬರನ್ನು ಟೀಂ ಇಂಡಿಯಾದಲ್ಲಿ ಪಾಂಡ್ಯ ಬ್ರದರ್ಸ್​ ಎಂದೇ ಕರೆಯಲಾಗುತ್ತದೆ. ಸದ್ಯ ಕೃನಲ್ ದಂಪತಿಗೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    MORE
    GALLERIES