ಕೆಎಸ್ ಭರತ್ ಸರಣಿಯ ಎಲ್ಲಾ ನಾಲ್ಕು ಪಂದ್ಯಗಳನ್ನು ಆಡಿದ್ದರು. ಭಾರತ ಸತತ ಎರಡನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ಬಾರಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ ತಂಡ ರನ್ನರ್ ಅಪ್ ಗೆ ತೃಪ್ತಿಪಡಬೇಕಾಯಿತು. ಈ ಬಾರಿ ಭಾರತ ಆಸ್ಟ್ರೇಲಿಯ ತಂಡವನ್ನು ಎದುರಿಸಬೇಕಿದೆ. ಜೂನ್ 7 ರಿಂದ 11 ರವರೆಗೆ ಎರಡೂ ತಂಡಗಳು ಇಂಗ್ಲೆಂಡ್‌ನ ಓವಲ್‌ನಲ್ಲಿ ಆಡಲಿವೆ.