KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

KL Rahul: ಲಕ್ನೋ ತಂಡದ ವೈದ್ಯಕೀಯ ಮೂಲಕಗಳ ಪ್ರಕಾರ, ಯಾರಾದರೂ ಈ ರೀತಿಯ ಗಾಯಗೊಂಡಾಗ ಆ ಪ್ರದೇಶದಲ್ಲಿ ಮತ್ತು ಸುತ್ತಲೂ ಸಾಕಷ್ಟು ನೋವು ಮತ್ತು ಊತ ಇರುತ್ತದೆ.

First published:

 • 18

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರೀ ಹಿನ್ನಡೆ ಆಗಿದೆ. ತಂಡದ ನಾಯಕ ಕೆಎಲ್ ರಾಹುಲ್ ಸಂಪೂರ್ಣ ಐಪಿಎಲ್ ಸೀಸನ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಪಿಟಿಐ ವರದಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೀಲ್ಡಿಂಗ್ ವೇಳೆ ನಾಯಕ ಗಾಯಗೊಂಡಿದ್ದರು.

  MORE
  GALLERIES

 • 28

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ರಾಹುಲ್​ಗೆ ಆದ ಗಾಯವು ತುಂಬಾ ಗಂಭೀರವಾಗಿದೆ ಮತ್ತು ಅವರು ಟೂರ್ನಿಯಲ್ಲಿ ಮುಂದೆ ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಆರ್​ಸಿಬಿ ಪಂದ್ಯದ ವೇಳೆ ತೊಡೆಯ ಗಾಯಕ್ಕೆ ಒಳಗಾದ ಲಕ್ನೋ ನಾಯಕ ಕೆಎಲ್​ ರಾಹುಲ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

  MORE
  GALLERIES

 • 38

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ವರದಿಗಳನ್ನು ನಂಬುವುದಾದರೆ, ಜೂನ್ 7 ರಿಂದ 11ರ ವರೆಗೆ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೆಎಲ್ ರಾಹುಲ್ ಫಿಟ್ ಆಗುವುದು ಕಷ್ಟ. ಫಾಫ್ ಡು ಪ್ಲೆಸಿಸ್ ಅವರ ಕವರ್ ಡ್ರೈವ್ ಬೌಂಡರಿ ಬಳಿ ತಡೆಯಲು ಪ್ರಯತ್ನಿಸಿದಾಗ ರಾಹುಲ್​ ಅವರ ಬಲ ತೊಡೆಗೆ ಗಾಯವಾಗಿತ್ತು.

  MORE
  GALLERIES

 • 48

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಬಿಸಿಸಿಐ ಮೂಲದ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಪ್ರಸ್ತುತ ಲಕ್ನೋ ತಂಡದೊಂದಿಗೆ ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ವೀಕ್ಷಿಸಿದ ಬಳಿಕ ಗುರುವಾರ ಮುಂಬೈಗೆ ತೆರಳಲಿದ್ದಾರೆ.

  MORE
  GALLERIES

 • 58

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಬಳಿಕ ಮುಂಬೈನಲ್ಲಿರುವ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ರಾಹುಲ್​ ಅವರ ಗಾಯದ ಸ್ಕ್ಯಾನಿಂಗ್​ ನಡೆಯುತ್ತದೆ. ಇದರ ಜೊತೆಗೆ ಜೈದೇವ್ ಉನದ್ಕಟ್​ ಅವರ ಇಂಜುರಿ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿದುಬಂದಿದೆ.

  MORE
  GALLERIES

 • 68

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಹೀಗಾಗಿ ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಈ ಬಗ್ಗೆ ಲಕ್ನೋ ತಂಡದ ವೈದ್ಯಕೀಯ ಮೂಲಕಗಳ ಪ್ರಕಾರ, ಯಾರಾದರೂ ಈ ರೀತಿಯ ಗಾಯಗೊಂಡಾಗ ಆ ಪ್ರದೇಶದಲ್ಲಿ ಮತ್ತು ಸುತ್ತಲೂ ಸಾಕಷ್ಟು ನೋವು ಮತ್ತು ಊತ ಇರುತ್ತದೆ.

  MORE
  GALLERIES

 • 78

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಈ ಊತವು ಸುಮಾರು 24 ರಿಂದ 48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ಮಾತ್ರ ನೀವು ಸ್ಕ್ಯಾನ್ ಮಾಡಬಹುದು ಎಂದು ತಿಳಿಸಿದೆ. ಅಲ್ಲದೇ ರಾಹುಲ್​ ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಆದ್ದರಿಂದ ಮುಂದೆ ಐಪಿಎಲ್‌ನಲ್ಲಿ ಭಾಗವಹಿಸದಿರುವುದು ಕಷ್ಟವಾಗಬಹುದು.

  MORE
  GALLERIES

 • 88

  KL Rahul: ಐಪಿಎಲ್​ನಿಂದ ಕೆಎಲ್​ ರಾಹುಲ್​ ಔಟ್​! ಟೀಂ ಇಂಡಿಯಾಗೆ ಶುರುವಾಯ್ತು ಹೊಸ ಟೆನ್ಷನ್​

  ಇದರಿಂದಾಗಿ ಮುಂಬರಲಿರುವ WTC ಫೈನಲ್​ಗಾಗಿ ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್​ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್​ ಈ ಸೀಸನ್​ನಿಂದ ಹೊರಗುಳಿಯಲಿದ್ದು, ಅವರ ಬದಲಿಗೆ ಕೃನಲ್​ ಪಾಂಡ್ಯ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ.

  MORE
  GALLERIES