ಕೆಎಲ್ ರಾಹುಲ್ ಅವರ ಎಡ ಕೈ ಮೇಲೆ ಎತ್ತರದ ಕಟ್ಟಡದ ಚಿತ್ರವಿದೆ. ವಾಸ್ತವವಾಗಿ, ಇದು ಕಟ್ಟಡವಲ್ಲ. ಇದು ದೀಪಸ್ತಂಭವಾಗಿದೆ. ಇದು ಅವರ ಬಾಲ್ಯದ ನೆನಪುಗಳಿಗಾಗಿ ಹಾಕಿಸಿಕೊಂಡಿದ್ದಾರಂತೆ. ಮಂಗಳೂರಿನಲ್ಲಿ ಅವರ ಮನೆಯ ಸಮೀಪವೇ ಈ ಲೈಟ್ ಹೌಸ್ ಇದೆ. ಕೆಎಲ್ ರಾಹುಲ್ ಈಗ ಮುಂಬೈನಲ್ಲಿ ನೆಲೆಸಿದ್ದು, ಮಂಗಳೂರಿಗೆ ಹೆಚ್ಚು ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ.