KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

LSG vs GT: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಐಪಿಎಲ್ 2023 ರ 30 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕ ಗಳಿಸಿದರು.

First published:

 • 18

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಐಪಿಎಲ್ 2023ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕ ಗಳಿಸಿದರು. ಐಪಿಎಲ್ 16ನೇ ಋತುವಿನಲ್ಲಿ ರಾಹುಲ್ ಗಳಿಸಿದ ಎರಡನೇ ಅರ್ಧಶತಕ ಇದಾಗಿದೆ.

  MORE
  GALLERIES

 • 28

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಕೆಎಲ್ ರಾಹುಲ್ 38 ಎಸೆತಗಳಲ್ಲಿ ತಮ್ಮ 50 ರನ್‌ಗಳನ್ನು ಪೂರ್ಣಗೊಳಿಸಿದರು. ಈ ವೇಳೆ ಅವರು 8 ಬೌಂಡರಿಗಳನ್ನು ಬಾರಿಸಿದರು. ಇದಕ್ಕೂ ಮುನ್ನ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ವಿರುದ್ಧ 74 ರನ್‌ಗಳ ಇನಿಂಗ್ಸ್ ಆಡಿದ್ದರು. ಅಂತಿಮವಾಗಿ ರಾಹುಲ್​ ಇಂದು 61 ಎಸೆತದಲ್ಲಿ 68 ರನ್​ ಗಳಿಸಿದರು.

  MORE
  GALLERIES

 • 38

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಒಟ್ಟಾರೆ 33ನೇ ಅರ್ಧಶತಕ ಗಳಿಸಿದರು. ಈ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ಪವರ್‌ಪ್ಲೇಯಲ್ಲಿ 110 ಸ್ಟ್ರೈಕ್ ರೇಟ್ ಹೊಂದಿದ್ದರು. ಆದರೆ, ಈ ಪಂದ್ಯದಲ್ಲಿ ಅವರು 158 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು.

  MORE
  GALLERIES

 • 48

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಈ ಪಂದ್ಯದಲ್ಲಿ ಕೆಎಲ್ ರಾಹುಲ್ ತಮ್ಮ ಹೆಸರಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರು ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 7000 T20 ರನ್ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

  MORE
  GALLERIES

 • 58

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಅವರು 197 ಇನ್ನಿಂಗ್ಸ್‌ಗಳಲ್ಲಿ ಈ ರನ್‌ಗಳನ್ನು ಪೂರ್ಣಗೊಳಿಸಿದರು. ವಿರಾಟ್ ಕೊಹ್ಲಿ 212, ಶಿಖರ್ ಧವನ್ 246, ಸುರೇಶ್ ರೈನಾ 251 ಮತ್ತು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ 7000 ಟಿ20 ರನ್ ಗಳಿಸಲು 258 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

  MORE
  GALLERIES

 • 68

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಈ ಮೂಲಕ ಕನ್ನಡಿಗ ರಾಹುಲ್​ ವಿರಾಟ್ ಕೊಹ್ಲಿ, ಸುರೇಶ್ ರೈನ, ರೋಹಿತ್​ ಶರ್ಮ ಆವರ ದಾಖಲೆಗಳನ್ನು ಮುರಿದಿದ್ದಾರೆ. ಆದರೆ ರಾಹುಲ್​ ಅರ್ಧಶತಕದ ನಡುವೆಯೂ ಲಕ್ನೋ ತಂಡ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

  MORE
  GALLERIES

 • 78

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  ಇದರ ನಡುವೆ, ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ವೇಗವಾಗಿ 4000 ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಐಪಿಎಲ್‌ನ 105 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ಈ ವಿಷಯದಲ್ಲಿ ಅವರು ಮೊದಲ ಸ್ಥಾನಕ್ಕೆ ಬಂದಿದ್ದಾರೆ. ಶನಿವಾರ ಪಂಜಾಬ್ ವಿರುದ್ಧ ರಾಹುಲ್ ಋತುವಿನ ಮೊದಲ ಅರ್ಧಶತಕ ಗಳಿಸಿದ್ದಾರೆ.

  MORE
  GALLERIES

 • 88

  KL Rahul: ಕೊಹ್ಲಿ-ರೋಹಿತ್​ ದಾಖಲೆ ಮುರಿದ ಕೆಎಲ್​ ರಾಹುಲ್! ಸೋಲಿನ ನಡುವೆಯೂ ಕನ್ನಡಿಗನಿಂದ ಹೊಸ ರೆಕಾರ್ಡ್​​

  2022ರ ಟಿ20 ವಿಶ್ವಕಪ್‌ಗೂ ಮುನ್ನ ಕೆಎಲ್ ರಾಹುಲ್ ಪ್ರದರ್ಶನದ ಮೇಲೆ ನಿರಂತರ ಪ್ರಶ್ನೆಗಳು ಎದ್ದಿದ್ದವು. ಕಳಪೆ ಪ್ರದರ್ಶನದಿಂದಾಗಿ ರಾಹುಲ್ ಆರಂಭಿಕ ಸ್ಥಾನವನ್ನೂ ಕಳೆದುಕೊಂಡಿದ್ದರು. ಟೀಂ ಇಂಡಿಯಾದಲ್ಲಿ ಶುಭಮನ್ ಗಿಲ್ ಅವರ ಸ್ಥಾನದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ.

  MORE
  GALLERIES