2023ರ ಕ್ರಿಕೆಟ್ ಋತುವಿಗೆ ನಮ್ಮ ಎಂಐ ಗ್ಲೋಬಲ್ ಕುಟುಂಬದ ಹೊಸ ನಾಯಕರ ಹೆಸರು ಘೋಷಿಸಲು ಅಪಾರ ಖುಷಿಯಾಗುತ್ತಿದೆ. ಪ್ರತಿಭೆ, ಅನುಭವ ಮತ್ತು ಉತ್ಸಾಹದ ಮಿಶ್ರಣವನ್ನು ಒಳಗೊಂಡ ಇಬ್ಬರು ಹೊಸ ನಾಯಕರನ್ನು ನಾವು ಪಡೆದಿದ್ದೇವೆ. ಪೊಲಾರ್ಡ್ ಮತ್ತು ರಶೀದ್ ಇಬ್ಬರೂ ಎಂಐನ ನೀತಿ ಮತ್ತು ಎಂಐನ ಕ್ರಿಕೆಟ್ ಬ್ರ್ಯಾಂಡ್ನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದು ಆಕಾಶ್ ಎಂ. ಅಂಬಾನಿ ಅವರು ಹೇಳಿದ್ದಾರೆ.
ರಶೀದ್ ಖಾನ್ ಸಾರಥ್ಯದ ಎಂಐ ಕೇಪ್ಟೌನ್ ತಂಡವು ದಕ್ಷಿಣ ಆಫ್ರಿಕಾದ ಸ್ಥಳೀಯ ಆಟಗಾರರಾದ ಕಗಿಸೊ ರಬಾಡ, ಡಿವಾಲ್ಡ್ ಬ್ರೆವಿಸ್, ರಸ್ಸೀ ವಾನ್ ಡರ್ ಡುಸೆನ್ ಅವರೊಂದಿಗೆ ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಒಳಗೊಂಡಿದೆ. SA20 ಟೂರ್ನಿಯು 2023ರ ಜನವರಿ 10ರಂದು ಆರಂಭಗೊಳ್ಳಲಿದ್ದು, ಎಂಐ ಕೇಪ್ಟೌನ್ ತಂಡವು ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜು ಡಿಸೆಂಬರ್ 23 ರಂದು ಕೇರಳದ ಕೊಚ್ಚಿನ್ನಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಸರು ನೊಂದಾಯಿಸಿಕೊಂಡಿರವವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ. ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಸುತ್ತಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ (ಡಿಸೆಂಬರ್ 1) ಅಧಿಕೃತವಾಗಿ ಘೋಷಣೆ ಮಾಡಿದೆ.