KCC 2023: ಕೆಸಿಸಿ ಟೂರ್ನಿಯಲ್ಲಿ ಪುನೀತ್ಗೆ ವಿಶೇಷ ಗೌರವ! ಅಪ್ಪು ಎಂದೆಂದಿಗೂ ಜೀವಂತ ಎಂದ ಫ್ಯಾನ್ಸ್
KCC 2023: ಸಿನಿಮಾ ಶೂಟಿಂಗ್ ನಡುವೆ ಸ್ಯಾಂಡಲ್ವುಡ್ (Sandalwood) ಮಂದಿ ಇದೀಗ ಕ್ರಿಕೆಟ್ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season) ಅದ್ಧೂರಿಯಾಗಿ ನಡೆದಿದೆ. ಈ ಬಾರಿ ಟೂರ್ನಿಯಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ. 24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆಯಿತು. ಮೊದಲ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
2/ 8
ಹೌದು, ಪುನೀತ್ ರಾಜ್ಕುಮಾರ್ ಅವರಿರುವ ಒಂದು ಫೊಟೋವನ್ನು ಕಲಾವಿದನೊಬ್ಬ ಎಡಿಟ್ ಮಾಡಿರುವುದು ಸಖತ್ ವೈರಲ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ಜೊತೆ ಅಪ್ಪು ಅವರ ಪೋಟೋವನ್ನು ಎಡಿಟ್ ಮಾಡಲಾಗಿದೆ. (ಚಿತ್ರ ಕೃಪೆ: ಮುಕೇಶ್ ಭಾನುಕುಮಾರ್ ಎಂಬಿ)
3/ 8
ಸದ್ಯ ಅಪ್ಪು ಮತ್ತು ರೈನಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಪುನೀತ್ ಅವರು ಎಂದಿಗೂ ನಮ್ಮೊಂದಿಗೆ ಇದ್ದಾರೆ ಎಂದು ಭಾವನಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
4/ 8
ಇನ್ನು, ಈ ಬಾರಿ ಕೆಸಿಸಿ 2023 ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲಾ ತಂಡಗಳ ಜರ್ಸಿಗಳ ಮೇಲೆ ನಟ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಹಾಕಿಸಲಾಗಿದ್ದು, ಈ ಮೂಲಕ ಸ್ಯಾಂಡಲ್ವುಡ್ ಮಂದಿ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
5/ 8
ಈ ಪಂದ್ಯವಾಳಿಯಲ್ಲಿ ನಟ ಡಾಲಿ ಧನಂಜಯ್, ಮಿಲನಾ ನಾಗರಾಜ್, ಡಾಲಿಂಗ್ ಕೃಷ್ಣ, ಗಣೇಶ್ ಸೇರಿದಂತೆ ಸ್ಯಾಂಡಲ್ವುಡ್ ನ ಎಲ್ಲಾ ನಟ ನಟಿಯರೂ ಪಾಲ್ಗೊಂಡಿದ್ದರು.
6/ 8
ಅದರಲ್ಲಿಯೂ ಈ ಬಾರಿಯ ವಿಶೇಷ ಎಂಬಂತೆ ಟೂರ್ನಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಕ್ರಿಸ್ ಗೇಲ್, ಸುರೇಶ್ ರೈನಾ, ಬ್ರಿಯಾನ್ ಲಾರಾ, ತಿಲಕರತ್ನೆ ದಿಲ್ಶಾನ್, ಹರ್ಷಲ್ ಗಿಬ್ಸ್ ಮತ್ತು ಸುಬ್ರಮಣ್ಯಂ ಬದ್ರಿನಾಥ್ ಪಾಲ್ಗೊಂಡಿದ್ದರು.
7/ 8
ಕೆಸಿಸಿ 2023 ಪಂದ್ಯವಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಇದಾದ ಬಳಿಕ ಟೂರ್ನಿಯ ಪಂದ್ಯವಳಿಗಳು ಆರಂಭವಾದವು.
8/ 8
ಈ ಬಾರಿ ಒಟ್ಟು 6 ತಂಡಗಳು ಕಣಕ್ಕಿಳಿದಿದ್ದವು. ಅವುಗಳೆಂದರೆ, ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್ ಮತ್ತು ವಡಿಯರ್ ಚಾರ್ಜರ್ಸ್.
First published:
18